Homeಸುದ್ದಿಗಳುವಾಕ್ ಮತ್ತು ಶ್ರವಣನ್ಯೂನತೆ ಮಕ್ಕಳ ವಸತಿ ಸಹಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ

ವಾಕ್ ಮತ್ತು ಶ್ರವಣನ್ಯೂನತೆ ಮಕ್ಕಳ ವಸತಿ ಸಹಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ

ಹುನಗುoದ: ಬಿಜಾಪುರ ಇಂಟಿಗ್ರೆಟೆಡ್ ರೂರಲ್ ಡೆವ್ಹಲಪ್‌ಮೆಂಟ್ ಸೊಸಾಯಟಿ (ಬರ್ಡ್ಸ) ಹುನಗುಂದ ಹಾಗೂ ಎಕ್ಸಿಲೋ ಫಿನ್‌ಸರ್ವ ಪ್ರೆöÊವೆಟ್ ಲಿಮಿಟೆಡ್ ಬಾಂಬೆ ಇವುಗಳ ಸಂಯುಕ್ತಾಶ್ರಯದಲ್ಲಿ ಬಾಗಲಕೋಟ, ಹುನಗುಂದ ಹಾಗೂ ಇಲಕಲ್ ತಾಲೂಕಿನ ವಾಕ್ ಮತ್ತು ಶ್ರವಣ ನ್ಯೂನತೆಯುಳ್ಳ ಮಕ್ಕಳ ನಾಲ್ಕು ದಿನಗಳ ಕಾಲ ನಡೆದ ವಸತಿ ಸಹಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬಾಗಲಕೋಟದ ಅಧಿಕಾರಿಗಳಾದ ಸವಿತಾ ಕಾಳೆಯವರು ಮಕ್ಕಳಿಗೆ ಸರ್ಟಿಫಿಕೇಟ್ ಹಾಗೂ ಕಲಿಕಾ ಕಿಟ್ ವಿತರಿಸಿ ಮಾತನಾಡಿ, ಇಂತಹ ಮಕ್ಕಳು ಒಂಭತ್ತನೇ ವರ್ಗದವರೆಗೆ ಶಾಲೆಗೆ ಬರುತ್ತಾರೆ ಆದರೆ 10 ನೇ ವರ್ಗಕ್ಕೆ ಬಂದಾಗ ಶಾಲೆ ಬಿಡುವ ಹಾಗೂ ಪಾಸಾಗುವವರ ಸಂಖ್ಯೆ ಕಡಿಮೆ ಆಗುತ್ತದೆ. ಇದನ್ನು ತಡೆಗಟ್ಟಲು ಸಂಘ, ಸಂಸ್ಥೆಗಳು ಹಾಗೂ ಇಲಾಖೆಗಳು ಜಂಟಿಯಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಹಾಗೂ ಇಂತಹ ಮಕ್ಕಳಿಗೆ ವಿಶೇಷ ವ್ಯವಸ್ಥೆಗಳಾದ ಸಂಜ್ಞಾ ಭಾಷೆ, ಸ್ಪೀಚ್ ಥೆರಪಿ ಮತ್ತು ಲಿಪ್ ಲ್ಯಾಂಗ್ವೇಜ್ ನಡೆಯಬೇಕು. ಬರ್ಡ್ಸ ಸಂಸ್ಥೆಯು ವಿಕಲಚೇತನರ ಹಾಗೂ ಆರೈಕೆದಾರರ ಜತೆ ಬಾಗಲಕೋಟಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಕ್ಕಾಗಿ 2024 ರಲ್ಲಿ ರಾಜ್ಯ ಪ್ರಶಸ್ತಿ ಸಿಕ್ಕಿದೆ ಮುಂದುವರೆದು ಇನ್ನೂ ಹೆಚ್ಚಾಗಿ ಕೆಲಸ ನಿರ್ವಹಿಸಬೇಕು ಅದಕ್ಕಾಗಿ ನಮ್ಮ ಇಲಾಖೆಯ ಸಹಾಯ ಸಹಕಾರ ಇದೆ ಎಂದರು.

ಕಿಟ್ ನಲ್ಲಿ ಶಿಕ್ಷಣ ಹೊಂದುವ ಕಲಿಕಾ ಸಾಮಗ್ರಿಗಳಿವೆ ಅವುಗಳನ್ನು ಉಪಯೋಗಿಸಲು ಪಾಲಕರಿಗೆ ತಿಳಿಸಿದರು. ಬಿಆರ್‌ಸಿಯ ಬಿಐಇಆರ್‌ಟಿ ಗಳಾದ ಸುರೇಶ ಸುಳಿಭಾವಿ ಮಾತನಾಡುತ್ತಾ ಅವಳಿ ತಾಲೂಕಿನಲ್ಲಿ ವಿಕಲಚೇತನ ವಿದ್ಯಾರ್ಥಿಗಳನ್ನು ಸರಕಾರ ನೇರವಾಗಿ ತಲುಪಿಸುತ್ತಿದೆ ಅದರಲ್ಲೂ ಶಿಕ್ಷಣ ಇಲಾಖೆಯು ಉತ್ತಮವಾಗಿ ಮಾಹಿತಿ ಹಾಗೂ ತರಬೇತಿ ನೀಡುತ್ತಿದೆ. ಸರಕಾರದಿಂದ ಬರುವ ಸೌಲಭ್ಯಗಳಿಂದ ಯಾರೂ ವಂಚಿತರಾಗಬಾರದು ಎಂದರು.

ಪ್ರಾಸ್ತಾವಿಕವಾಗಿ ಸಂಸ್ಥೆಯ ಸ್ಥಾಪಕ ಮಹಾಂತೇಶ ಅಗಸಿಮುಂದಿನ ಮಾತನಾಡಿ ಕಳೆದ ನಾಲ್ಕು ದಿನಗಳಿಂದ ಬಿಡಿ ತಟ್ಟಿ ಲಕ್ಷೇಶ್ವರ ಹಾಗೂ ಬರ್ಡ್ಸ ತುಕಾನಟ್ಟಿ ಶಾಲೆಯ ಶಿಕ್ಷಕರು ಉತ್ತಮವಾಗಿ ತರಬೇತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಾಗಲಕೋಟೆಯಲ್ಲಿ ವಿಶೇಷ ಶಾಲೆ ಆರಂಬಿಸುವ ಯೋಜನೆ ಇದೆ ಪ್ರತಿ ವರ್ಷ ಬೇಸಿಗೆ ಹಾಗೂ ದಸರಾ ಶಿಬಿರಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ಇದು 14ನೇಯ ಶಿಬಿರ ಬಾಗಲಕೋಟ, ಇಳಕಲ್ಲ, ಹುನಗುಮದ ತಾಲೂಕ ಸೇರಿ ಒಟ್ಟು 48 ಮಕ್ಕಳು ಬಾಗವಹಿಸಿದ್ದಾರೆ. ಇಂತಹ ಮಕ್ಕಳಿಗೆ ಸ್ವ ಸಾಮರ್ಥ್ಯ ಇದೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಯಲ್ಲಿ 100 ಕ್ಕೆ 100 ರಷ್ಟು ಪಾಸಾಗಿದ್ದಾರೆ ಎಂದು ಹೇಳಿ, ಇದೇ ರೀತಿ ಸಹಾಯ ಸಹಕಾರ ಇಲಾಖೆ, ಜನಪ್ರತಿನಿಧಿಗಳು, ಸಾಮಾಜಿಕ ಕ್ಲಬ್‌ಗಳ ಸಹಾಯ ಸಹಕಾರ ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಬರ್ಡ್ಸ ಚೇರಮನ್ ಪ್ರೊ. ಸಿ.ಜಿ.ಹವಾಲ್ದಾರ ಮಾತನಾಡುತ್ತಾ ಸಂಸ್ಥೆಯು ವಿಶೇಷ ಚೇತನ ಮಕ್ಕಳು ಹಾಗೂ ಆರೈಕೆದಾರರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಸಿಎಸ್‌ಆರ್ ಆರ್ಥಿಕ ಸಹಾಯದಿಂದ ಹಾಗೂ ದಾನಿಗಳ ನೆರವಿನಿಂದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುತ್ತಿದೆ. ಇದಕ್ಕೆ ಕ್ಷೇತ್ರಮಟ್ಟದ ಸಿಬ್ಬಂದಿಗಳ ಪರಿಶ್ರಮ ಉನ್ನತವಾಗಿದೆ. ವಿಶೇಷ ಶಾಲೆ ತೆಗೆಯಲು ಎಲ್ಲ ಸೌಲಭ್ಯಗಳನ್ನು ಹೊಂದಿದ ಸ್ವಂತ ಕಟ್ಟಡ ಇದೆ. ಮುಂದಿನ ದಿನಮಾನಗಳಲ್ಲಿ ಅನುಷ್ಠಾನ ಮಾಡುತ್ತೇವೆಂದರು.

ಅಜೀವ ಸದಸ್ಯರಾದ ವೀರೇಶ ಕುರ್ತಕೋಟಿ ಉಪಸ್ಥಿತರಿದ್ದರು. ಸ್ವಾಗತವನ್ನು ನಾಗರತ್ನ ಮಾಡಿದರು ವಂದನಾರ್ಪನೆಯನ್ನು ಕಾವ್ಯಾ ಅಗಸಿಮುಂದಿನ ಮಾಡಿದರೆ ಕಾರ್ಯಕ್ರಮ ನಿರ್ವಹಣೆ ಪ್ರವೀಣಕುಮಾರ ಮಾಡಿದರು. 48 ಮಕ್ಕಳಿಗೆ ಕಲಿಕಾ ಕಿಟ್ ಹಾಗೂ ಸರ್ಟಿಫಿಕೇಟ ವಿತರಿಸಲಾಯಿತು

RELATED ARTICLES

Most Popular

error: Content is protected !!
Join WhatsApp Group