ದಿ. ೩೦ ರಂದು ಹುನಗುಂದಲ್ಲಿ ಬಸವ ಜಯಂತ್ಯುತ್ಸವ ಕಾರ್ಯಕ್ರಮ

Must Read

ಹುನಗುಂದ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ತಾಲೂಕ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆಗಳ ಸಹಯೋಗದಲ್ಲಿ ಶರಣ ಸಂಗಣ್ಣ ಗಂಜೀಹಾಳರವರ ಮನೆಯ ಆವರಣದಲ್ಲಿ (ಶ್ರೀ ಸಂಗಮೇಶ್ವರ ಗುಡಿಯ ಹತ್ತಿರ) ಬಸವ ಜಯಂತ್ಯುತ್ಸವ ಹಾಗೂ 32 ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ದಿನಾಂಕ 30 ರಂದು ಶುಕ್ರವಾರ ಸಂಜೆ 6:00 ಗಂಟೆಗೆ ಜರುಗಲಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿತ್ರರಗಿ ಸಂಸ್ಥಾನ ಮಠ ಇಲ್ಕಲ್ಲಿನ ಮ.ನಿ.ಪ್ರ. ಗುರು ಮಹಾಂತ ಸ್ವಾಮಿಗಳು ವಹಿಸುವರು

ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾದಾಮಿಯ ಪ್ರಾಧ್ಯಾಪಕರಾದ ಚಂದ್ರಶೇಖರ ಹೆಗಡೆ ಅನುಭಾವ
ನೀಡುವರು. ಸಭೆಯ ಅಧ್ಯಕ್ಷತೆಯನ್ನು ಪ್ರೊ.ಎಸ್.ಎನ್.
ಹಾದಿಮನಿ ವಹಿಸಲಿದ್ದಾರೆ.

ಸಭೆಯಲ್ಲಿ ಹಿರಿಯ ಮಕ್ಕಳ ಸಾಹಿತಿಗಳಾದ ಡಾ. ಲಲಿತಾ ಹೊಸಪ್ಯಾಟಿ , ಡಾ. ಶಿವಗಂಗಾ ರಂಜಣಗಿ ಹಾಗೂ ಪ್ರಭು ಮಾಲಗಿತ್ತಿಮಠ ಉಪಸ್ಥಿತರಿರುವರು ಹಾಗೂ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಭಾಗವಹಿಸುವರೆಂದು ಪರಿಷತ್ತಿನ ಕಾರ್ಯದರ್ಶಿಯಾದ
ಸಂಗಮೇಶ ಹೊದ್ಲೂರ ತಿಳಿಸಿದ್ದಾರೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group