Homeಸುದ್ದಿಗಳುಶಿಕ್ಷಕ ಜಿ.ಬಿ. ರಾವಳ ಸೇವಾ ನಿವೃತ್ತಿ

ಶಿಕ್ಷಕ ಜಿ.ಬಿ. ರಾವಳ ಸೇವಾ ನಿವೃತ್ತಿ

ಎಮ್ ಕೆ ಹುಬ್ಬಳ್ಳಿ : ಎಂ.ಕೆ. ಹುಬ್ಬಳ್ಳಿಯ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಪ್ರಭಾರಿ ಪ್ರಧಾನ ಗುರುಗಳಾದ ಜಿ.ಬಿ. ರಾವಳ ಅವರು ರವಿವಾರ ಸೇವಾ ನಿವೃತ್ತಿ ಹೊಂದಿದ್ದಾರೆ.

ಅವರು 1990ರಲ್ಲಿ ಚಿತ್ರದುರ್ಗ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆನ್ನಡಲು ಎಂಬಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ನಂತರ ಅವರು ಬೋಗುರ ಲಕ್ಕಿಬೈಲ ಹಾಗೂ ಎಂ.ಕೆ. ಹುಬ್ಬಳ್ಳಿಯ ಗಂಡು ಮಕ್ಕಳ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸತತ 35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಶ್ರದ್ಧೆ, ಬದ್ಧತೆಯಿಂದ ಕಾರ್ಯನಿರ್ವಹಿಸಿದ ರಾವಳರ ಸೇವೆ ಅನನ್ಯವಾಗಿದೆ. ಅವರ ಮಾರ್ಗದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ.

ಅವರ ಸೇವೆಗಾಗಿ ಎಂ.ಕೆ. ಹುಬ್ಬಳ್ಳಿ ಕ್ಲಸ್ಟರ್‌ನ ಶಿಕ್ಷಕವೃಂದ, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಶಿಷ್ಯಬಳಗ ಕೃತಜ್ಞತೆ ವ್ಯಕ್ತಪಡಿಸಿದ್ದು, ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group