ಮೂಡಲಗಿ -ತಾಲೂಕಿನ ಅವರಾದಿ ಗ್ರಾಮದಲ್ಲಿ ಆರ್ ಸಿ ಬಿ ಗೆಲುವಿನ ಸಂತಸದಲ್ಲಿ ಭಾಗಿಯಾದ ೨೫ ವರ್ಷದ ಮಂಜುನಾಥ ಕಂಬಾರ ಎಂಬುವವನು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ನಡೆದ ಬೆಂಗಳೂರು ಮತ್ತು ಪಂಜಾಬ್ ತಂಡದ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಆರ್ ಸಿ ಬಿ ತಂಡ ಜಯ ಗಳಿಸಿದ ನಂತರ ನಡೆದ ವಿಜಯೋತ್ಸವ ಆಚರಿಸುವ ಸಮಯದಲ್ಲಿ ಹೃದಯಾಘಾತದಿಂದ ಸಾವು ಆಗಿರುವುದು ತಿಳಿದು ಬಂದಿದೆ.
ವಿರಾಟ ಕೊಹ್ಲಿ ಅವರ ಅಪ್ಪಟ್ಟ ಅಭಿಮಾನಿಯಾಗಿದ್ದ ಮಂಜು ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದ ಮಂಜುನಾಥ ಕಂಬಾರ ಎಂಬ 25 ವರ್ಷದ ಯುವಕ ಆರ್ ಸಿ ಬಿ ತಂಡ ಜಯ ಗಳಿಸಿದಾಗ ಅತೀವ ಸಂತೋಷದಿಂದ ಕುಣಿದು ಕುಪ್ಪಳಿಸುವ ಸಮಯದಲ್ಲಿ ಹೃದಯಾಘಾತವಾಗಿ ಮರಣ ಹೊಂದಿದ್ದು, ಬಾಳಿ ಬದುಕಬೇಕಾದ 25 ವರ್ಷದ ಮಂಜು ಒಂದು ವರ್ಷದ ಮಗುವಿದ್ದು ಅವರ ಪತ್ನಿ ಜ್ಯೋತಿ ಈಗ ಗರ್ಭಿಣಿಯಾಗಿದ್ದಾರೆ. ತಂದೆ- ತಾಯಿ, ಅಜ್ಜ-ಅಜ್ಜಿ, ಸಹೋದರರನ್ನು ಅಗಲಿದ್ದಾರೆ.