ಬೀದರ – ಬಕ್ರೀದ್ ಹಬ್ಬದ ನೆಪದಲ್ಲಿ ಜಿಲ್ಲೆಯಲ್ಲಿ ಅನಧಿಕೃತ ಗೋವು ಒಂಟೆಗಳ ಸಾಗಾಟ ಮತ್ತು ವಧೆ ಮಾಡುವುದನ್ನು ನಿಷೇಧಿಸಲಾಗಿದೆ ಎಂಬ ಜಿಲ್ಲಾಡಳಿತದ ಆದೇಶವಿದ್ದರೂ ಬಸವಕಲ್ಯಾಣದಲ್ಲಿ ಗೋವಧೆ ಮಾಡುತ್ತಿದ್ದವರ ಮನೆಗೆ ಹೋಗಿ ಬಿಜೆಪಿ ಶಾಸಕ ಶರಣು ಸಲಗರ ಗೋವಧೆ ಮಾಡದಂತೆ ಎಚ್ಚರಿಕೆ ನೀಡಿದರು.
ಪೊಲೀಸರೊಂದಿಗೆ ಗೋ ಕಟುಕರ ಮನೆಗಳಿಗೆ ಹೋಗಿ ಗೋವಧೆಯನ್ನು ನಿಲ್ಲಿಸಿದ ಶಾಸಕರು, ನಾನು ಇರುವವರೆಗೂ ಜಿಲ್ಲೆಯಲ್ಲಿ ಗೋವಧೆ ಮಾಡಲು ಬಿಡುವುದಿಲ್ಲ ಎಂದು ಗರ್ಜಿಸಿದರು.
ಸುಮಾರು ಹದಿನೈದಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಿದ ಶಾಸಕರು, ಕಾಂಗ್ರೆಸ್ ನಾಯಕ ವಿಜಯ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ಆದೇಶದಂತೆ ಗೋವಧೆ ತಡೆಯುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡರು.
ಫೇಸ್ ಬುಕ್ ಲೈವ್ ನಲ್ಲಿಯೇ ಗೋವಧೆ ನಡೆಯುತ್ತಿದ್ದ ಮನೆಗಳಿಗೆ ಭೇಟಿಕೊಟ್ಟು ಆಕ್ರೋಶಭರಿತರಾಗಿ ಅವರಿಗೆ ಎಚ್ಚರಿಕೆ ನೀಡಿದರು.
ವರದಿ : ನಂದಕುಮಾರ ಕರಂಜೆ, ಬೀದರ

