ಮೈಸೂರು ಯಾವ ವ್ಯಕ್ತಿ ದಿವ್ಯ ಜೀವನವನ್ನು ಪ್ರೀತಿಸುತ್ತಾರೆ ಅವರು ನಿಯಮಗಳನ್ನು ಅವಶ್ಯವಾಗಿ ಸ್ವೀಕರಿಸುತ್ತಾರೆ ಎಂದು ಸೂರತ್ ಮಹಾನಗರ ಈಶ್ವರೀಯ ವಿಶ್ವವಿದ್ಯಾಲಯಗಳ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ತೃಪ್ತಿ ಬೆಹೆನ್ ಜೀ ಅಭಿಪ್ರಾಯಪಟ್ಟರು.
ಹುಣಸೂರು ರಸ್ತೆಯಲ್ಲಿರುವ ಜ್ಞಾನ ಸರೋವರ ಪುನಶ್ಚೇತನ ಕೇಂದ್ರದಲ್ಲಿ ನಡೆಯುತ್ತಿರುವ 5 ದಿನಗಳ ಅಖಂಡ ಮೌನ, ರಾಜಯೋಗ ಧ್ಯಾನ, ವ್ಯಕ್ತಿತ್ವ ವಿಕಸನ,ದಿವ್ಯಜೀವನ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಗೌರವ ಸಮರ್ಪಣೆಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಜೀವನದಲ್ಲಿ ಬದುಕೋದು ಎಂದರೆ ಅರ್ಥ, ಜೀವನ ಚಕ್ರದಲ್ಲಿ ನಿಯಮಗಳ ಮತ್ತು ಸಿದ್ಧಾಂತಗಳನ್ನು ಸ್ವೀಕರಿಸುವು ದೆಂತಾಗಿದೆ. ಹೇಗೆ ಏನೇ ಆಗಲಿ ಯಾವುದೇ ಶಾಶ್ವತವಲ್ಲ ಸದಾ ಖುಷಿಯಾಗಿರಬೇಕು ಜೀವನದ ಪ್ರತಿಯೊಂದು ಕ್ಷಣದ ಆನಂದವನ್ನು ತೆಗೆದುಕೊಳ್ಳಿ ಅಂತಹ ವ್ಯಕ್ತಿ ಎಂದು ಯಾರಿಗೂ ದೋಷವನ್ನು ಕೊಡುವುದಿಲ್ಲ ಬದಲಾಗಿ ತನ್ನ ತಪ್ಪುಗಳನ್ನು ತಿದ್ದುಕೊಳ್ಳುವ ಪ್ರಯತ್ನ ಪಡುತ್ತಾರೆ ಎಂದರು.
ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ರಾಜ ವಿದ್ಯಾರ್ಥಿಗಳು, ಐದು ದಿನಗಳು ಸಂಪೂರ್ಣ ಸಮಯವನ್ನು ವ್ಯರ್ಥ ಮಾಡದೆ ಪೂರ್ಣ ಲಾಭ ಮಾಡಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.
ಮೈಸೂರು ಉಪವಿಭಾಗದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ಮಾತನಾಡಿ, ಶಿಬಿರದಲ್ಲಿ ಪ್ರಾಪ್ತಿಯಾದ ಜ್ಞಾನ, ಪವಿತ್ರತೆ, ಶಾಂತಿ,ಪ್ರೀತಿ ಮತ್ತು ಕರುಣೆ ವ್ಯಕ್ತಿಯ ತನು ಮನವನ್ನು ಮತ್ತು ಸಮಸ್ತ ಕರ್ಮೇಂದ್ರಿಯಗಳನ್ನು ಶಾಂತ, ಶೀತಲ, ನಿರ್ವಿಕಾರಿಯನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಚಾಮರಾಜನಗರ ಮಂಡ್ಯ ಹಾಸನ ಕೊಡಗು ಜಿಲ್ಲೆಗಳಿಂದ ಸುಮಾರು 120ಕ್ಕೂ ಹೆಚ್ಚು ರಾಜಯೋಗ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಯೋಗಭವನದ ಬಿಕೆ ಶಾರದಾಜಿ ಕುಮಾರಣ್ಣ ಆತ್ಮಾನಂದಣ್ಣ ಗಂಗಣ್ಣ ಶಿವಲೀಲಾಜೀ ಬಿಕೆ ಆರಾಧ್ಯ ರುದ್ರೇಶ್ ರಾಮಚಂದ್ರ ಮುಂತಾದವರು ಹಾಜರಿದ್ದರು