ರಂಗಾಪೂರ ರಸ್ತೆ ಕಾಮಗಾರಿಗೆ ಚಾಲನೆ

Must Read

ಮೂಡಲಗಿ:-೨೦೨೪-೨೫ ನೆಯ ಸಾಲಿನ ಮಳೆ ಪರಿಹಾರ ಅನುದಾನದ ಅಡಿಯಲ್ಲಿನ ಮೂಡಲಗಿ ಶಿವಬೋಧರಂಗನ ಮಠದಿಂದ ರಂಗಾಪೂರ ರಸ್ತೆಯ ವರೆಗೆ ಸುಮಾರು ಅರ್ಧ ಕಿ.ಮೀಟರ್ ವರೆಗೆ ೬೦ ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶ್ರೀ ಶಿವಬೋಧರಂಗನ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿ ಚಾಲನೆ ಕೊಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಬಹಳ ದಿನಗಳ ಬೇಡಿಕೆಯಾಗಿದ್ದ ಮೂಡಲಗಿ-ರಂಗಾಪೂರ ಮತ್ತು ಮುನ್ಯಾಳ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಯು ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಗಮನಹರಿಸಿ ಅನುದಾನವನ್ನು ಬಿಡುಗಡೆ ಗೊಳಿಸಿದ್ದಾರೆ. ಈ ರಸ್ತೆ ಅಭಿವೃದ್ಧಿಯಿಂದ ಮುನ್ಯಾಳ, ರಂಗಾಪೂರ,ಕಮಲದಿನ್ನಿ ಹಾಗೂ ಇತರೆ ಗ್ರಾಮಗಳಿಗೂ ಸಂಚಾರಕ್ಕೆ ಅನುಕೂಲವಾಗುವುದು ಎಂದರು.

ಕಾಮಗಾರಿ ಚಾಲನೆಯ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಖುರ್ಷಾದ ಅನ್ವರ ನದಾಫ್,ಪುರಸಭೆಯ ಮುಖ್ಯಾಧಿಕಾರಿ ತುಕಾರಾಮ ಮಾದರ,ಪುರಸಭೆಯ ಸದಸ್ಯರುಗಳಾದ ರವೀಂದ್ರ ಸಣ್ಣಕ್ಕಿ,ಆನಂದ ಟಪಾಲದಾರ, ಶಿವು ಸಣ್ಣಕ್ಕಿ,ರವಿ ಮೂಡಲಗಿ, ಲಕ್ಕಪ್ಪ ಶಾಬಣ್ಣವರ,ವಿರುಪಾಕ್ಷ ಮುಗಳಖೋಡ,ಬಿಜೆಪಿಯ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ರವಿ ಸೋನವಾಲಕರ, ಈರಪ್ಪ ಬನ್ನೂರ,ರಾಮಣ್ಣ ಹಂದಿಗುಂದ, ಮರಿಯಪ್ಪ ಮರೆಪ್ಪಗೋಳ,ಗಿರೀಶ ಢವಳೇಶ್ವರ, ಅನ್ವರ ನದಾಫ್,ರಾಜು ಪೂಜೇರಿ,ಈಶ್ವರ ಕಂಕಣವಾಡಿ ,ಬಸವರಾಜ ಪಾಟೀಲ ಇನ್ನು ಅನೇಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group