ಪತ್ರಕರ್ತನ ಪುತ್ರನಿಗೆ ರಾಜ್ಯ ಮಟ್ಟದ ಸನ್ಮಾನ

Must Read

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಪತ್ರಕರ್ತ ವೀರೇಶ ಚ ಶಿಂಪಿ ಇವರ ಹಿರಿಯ ಸುಪುತ್ರ ಈ ಸಲದ ದ್ವಿತೀಯ ಪಿ ಯು ಸಿ ಯ ವಿಜ್ಞಾನ ವಿಭಾಗದಲ್ಲಿ ಶೇ 92/5 ಅಂಕಗಳೊಂದಿಗೆ ಪಾಸಾಗಿದ್ದು ಇದನ್ನು ಗಮನಿಸಿ ರಾಜ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಚಾಮರಾಜನಗರ ಜಿಲ್ಲಾ ಹಾಗೂ ಹನೂರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ಐತಿಹಾಸಿಕ ಸ್ಥಳ ಚಾಮರಾಜನಗರ ಜಿಲ್ಲೆ ಹನೂರ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ರಾಜ್ಯ ಪಶು ಸಂಗೋಪನ ಮತ್ತು ರೇಷ್ಮೆ ಸಚಿವರಾದ ಕೆ ವೆಂಕಟೇಶ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಗಳು, ಜಿಲ್ಲಾ ಎಸ್ ಪಿ ಸಾಹೇಬರು, ಜಿಲ್ಲೆ ಶಾಸಕರುಗಳು ಕಾ ನಿ ಪ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರ ಹಾಗೂ ಎಲ್ಲ ಪಧಾಧಿಕಾರಿಗಳ ಮತ್ತು ಸ್ಥಳೀಯ ಮುಖಂಡರುಗಳ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರನಾಗಿ ಕಂದಗಲ್ಲ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ಬಸವರಾಜ ವಿ ಶಿಂಪಿ ಯವರನ್ನು ಗ್ರಾಮದ ಪ್ರಗತಿಪರ ರೈತರು ಧಣಿಗಳಾದ ಚನ್ನಪ್ಪಗೌಡ್ರ ನಾಡಗೌಡ್ರ ಹಿರಿಯರಾದ ಮಹಾoತೇಶ ಕಡಿವಾಲ, ಮಹಮ್ಮದಸಾಬ ಭಾವಿಕಟ್ಟಿ ಅಮರೇಶ ಕೊಡಕೇರಿ ಲಿಂಗರಾಜು ಶಿರಗುಂಪಿ, ಸಂಗಣ್ಣ ಹವಾಲ್ದಾರ, ಪತ್ರಕರ್ತರು ಬಾಗಲಕೋಟ ಜಿಲ್ಲಾ ಕಾ ನಿ ಪ ಅಧ್ಯಕ್ಷರಾದ ಆನಂದ ಧಲಬಂಜನ ರಾಜ್ಯ ಸಮಿತಿಯ ಮಹೇಶ ಅಂಗಡಿ, ಬಿ ಬಾಬು,ನಾಗೇಶ್ ನಿಲೋಗಲ್ಲ ಇಲಕಲ್ಲ ಕಾ ನಿ ಪ ಅಧ್ಯಕ್ಷರಾದ ವಿನೋದ್ ಬಾರಿಗಿಡದ, ಜಾಕಿರಹುಸೇನ ತಾಳಿಕೋಟಿ, ಪ್ರಕಾಶ ಗುಳೇದಗುಡ್ಡ,ಗುರು ಗಾಣಿಗೇರ ಭೀಮಣ್ಣ ಗಾಣಿಗೇರ, ಸೇರಿದಂತೆ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು,ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಅಭಿನಂದಿಸಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group