ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದ ೧೦ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಜುಲೈ ೪ ರಿಂದ ೯ ವರೆಗೆ ೬ ದಿನ ಪೌರಾಣಿಕ ನಾಟಕೋತ್ಸವವನ್ನು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ವಿ.ನಾಗಮೋಹನ್ ತಿಳಿಸಿದ್ದಾರೆ.
೪ನೇ ತಾ. ಶುಕ್ರವಾರ ಪಿ.ಎಂ. ಮಲ್ಲೇಶ್‌ಗೌಡ್ರು, ರಂಗಸ್ವಾಮಿ ಇವರ ಶ್ರೀ ಚಾಮುಂಡೇಶ್ವರಿ ಕಲಾಸಂಘ, ಹಾಸನ ತಂಡದಿಂದ ಸಂಪೂರ್ಣ ರಾಮಾಯಣ, ೫ನೇ ತಾ. ಶನಿವಾರ ಚಂದ್ರಶೇಖರ ಸಿಗರನಹಳ್ಳಿ ಮಂಜು ತಟ್ಟೇಕೆರೆ ಇವರ ಶ್ರೀ ಲಕ್ಷ್ಮಿ ರಂಗನಾಥ ಸಾಂಸ್ಕೃತಿಕ ಕಲಾಸಂಘ, ಸಿಗರನಹಳ್ಳಿ ತಂಡದಿಂದ ಕುರುಕ್ಷೇತ್ರ, ೬ನೇ ತಾ. ಭಾನುವಾರ ಸತೀಶ ಕಬ್ಬತ್ತಿ, ವೈಭವ ವೆಂಕಟೇಶ ಇವರ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಹಾಸನ ತಂಡದಿಂದ ಚಂಡಾಸುರನ ವಧೆ ನಾಟಕ, ೭ನೇ ತಾ. ಸೋಮವಾರ ಬಾರೇಹೊಸರು ಜವರೇಗೌಡ್ರು, ಹನುಮೇಗೌಡ್ರು ಇವರ ಶ್ರೀ ಬಸವೇಶ್ವರ ಕಲಾಸಂಘ, ಹಾಸನ ತಂಡದಿಂದ ಛಲದೊಳ್ ದುರ್ಯೋಧನ, ೮ನೇ ತಾ. ಮಂಗಳವಾರ ರಮೇಶ್ ಗೌಡಪ್ಪ, ಹೆಚ್.ಎಂ.ಪ್ರಭಾಕರ್ ಇವರ ಹಾಸನಾಂಬ ಕಲಾ ಟ್ರಸ್ಟ್, ಹಾಸನ ತಂಡದಿಂದ ಧರ್ಮರಾಜ್ಯ ಸ್ಥಾಪನೆ ಮತ್ತು ೯ನೇ ತಾ. ಬುಧವಾರ ಸಿ.ಎ.ರಾಮಚಂದ್ರರಾವ್ ಇವರ ಶ್ರೀ ಮಾರುತಿ ಕಲಾ ಬಳಗ, ಬೆಂಗಳೂರು ತಂಡದಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.