Homeಕವನವಿಡಂಬನ ಕವನ

ವಿಡಂಬನ ಕವನ

ನಾಟಕ ಕರ್ನಾಟಕ

ದೃಶ್ಯ 1

ಐದು ವರ್ಷವೂ ನಾನೇ,
ಮತ್ತೈದು ನಾನೇ !
ತೆರವಾದರೇ ತಾನೇ ಬೇರೊಬ್ಬ ಪ್ರಶ್ನೆ ?
‘ ಟಗರು ‘ ಮೈಯುಜ್ಜಲಿಕೆ
ಮಾತ್ರ
ಬೇಕೊಂದು
‘ ಬಂಡೆ ‘
ಜಜ್ಜಿಕೊಳಲಿಕ್ಕಲ್ಲ
ಅದರ ಮಂಡೆ !

ದೃಶ್ಯ 2

ಏನೇ ಮಾಡಲಿ ಬಿಡಲಿ
‘ ಐ’ ಕಮಾಂಡ್
ದೆಹಲಿ…
ಆಗಾಗ
ಕೇಳುವುದೇ ನಮ್ಮ ಚಾಳಿ.
ನಮ್ಮನಮ್ಮೊಳಗಿಲ್ಲ ಬಿರುಕು ಬಂಡಾಯ
ಕಟ್ಟಲಿಲ್ಲವೇ ಸೇರಿ
ದಳ ಇನ್.ಡಿ. ಯ!

ದೃಶ್ಯ 3

ಕುಟುಂಬ ಒಂದನೇ ನಂಬಿ
ಕುಂಟುತಿದೆ ಪಕ್ಷ.
ತಿಂದು ತೇಗಿದರೆಲ್ಲ
ಲಕ್ಷ ಲಕ್ಷ !
ಬಿಡುವುದುಂಟೇ
‘ ಯತ್ನ – ಆಳ ‘ ತಲುಪದಲೇ?
ಕಾಣಿಸದೇ ಅಳಿಯನ
ಕುರುಡು ಬೆಳಗಾದರೆ !

ದೃಶ್ಯ 4

ತಾನೇ ಬಿದ್ದರೂ ಅಷ್ಟೇ,
ತಾಗಿ ಒಡೆದರೂ ಅಷ್ಟೇ,
‘ ಜೇಡಿ ‘ ಮಣ್ಣಿನ ಮಡಕೆ
ಆದರೂ
ಕುತ್ತಿಲ್ಲ ಜೀವಕೆ.!
ಸದಾ ಆಳುವ ಹೆಬ್ಬಯಕೆ.
ಸುಟ್ಟ ಬೂದಿಯಲೇ ಎದ್ದು ಬರುವ
ಫೀನಿಕ್ಸ್ ಹಕ್ಕಿ ರೆಕ್ಕೆ..!

ಡಾ. ಹೆಚ್. ಎಸ್ ಸುರೇಶ್
9448027400

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group