ನಕಲಿ ಕುಲಪತಿ
ನಕಲಿ ಅಂಕಪಟ್ಟಿಯ ತಂದು
ನಕಲಿ ಪದವಿಯ ಪಡೆದು
ನಕಲಿ ಸೇವಾ ದಾಖಲೆ ಕೊಟ್ಟು
ಮಲೆನಾಡ ಬೆಳಗಾವಿಯ
ಅಸಲಿ ವಿಶ್ವ ವಿದ್ಯಾಲಯದಲ್ಲಿ
ಒಬ್ಬ ನಕಲಿ ಕುಲಪತಿಯಾದನಯ್ಯ
ಒಬ್ಬ ಅಸಲಿ ತ್ಯಾಗಮೂರ್ತಿ
ಇಂತಪ್ಪ ನಕಲಿ ಕುಲಪತಿಯ
ನೇಮಕಮಾಡಿದವರ ಕಂಡು
ಮಮ್ಮಲ ಮರುಗಿದ ನಮ್ಮ
ಬಸವ ಪ್ರಿಯ ಶಶಿಕಾಂತ
ಹರ ಹರಾ ಶ್ರೀ ಸಿದ್ಧರಾಮೇಶ್ವರ
,,_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ