ಚಿಕ್ಕೋಡಿ ವಿಭಾಗದ ಬೆಳ್ಳಂಕಿ ಗ್ರಾಮ ಮೊದಲ 24*7 ನೀರು ಸರಬರಾಜು ಗ್ರಾಮ ಎಂದು ಘೋಷಣೆ

Must Read

ಚಿಕ್ಕೋಡಿ ವಿಭಾಗದ ಬೆಳ್ಳಂಕಿ ಗ್ರಾಮ ಮೊದಲ 24*7 ನೀರು ಸರಬರಾಜು ಗ್ರಾಮ ಎಂದು ಘೋಷಣ

ಬೆಳಗಾವಿ – ಜಿಲ್ಲಾ ಪಂಚಾಯತ್ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ, ತಾಲೂಕು ಪಂಚಾಯತ್ ಹುಕ್ಕೇರಿ ಗ್ರಾಮ ಪಂಚಾಯತಿಯ ಕೋಟ ಜಲ ಜೀವನ ಮಿಷನ್ ಯೋಜನೆಯಡಿ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಂಸ್ಥಿಕರಣದ ಬಲವರ್ಧನೆಯ ಅಂಗವಾಗಿ ಬೆಳಂಕ್ಕಿ ಗ್ರಾಮವನ್ನು 24*7 ನೀರು ಸರಬರಾಜು ಗ್ರಾಮವೆಂದು ಘೋಷಣೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಪಾಂಡುರಂಗ ರಾವ್ ಅವರು ಮಾತನಾಡಿ 24*7 ನೀರು ಸರಬರಾಜು ಯೋಜನೆಯ ಲಾಭ ಪಡೆಯಲು ಮತ್ತು ಭವಿಷ್ಯದಲ್ಲೂ ನೀರಿನ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕರಾದ ದಯಾನಂದ ಪಾಟೀಲ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಹುಕ್ಕೇರಿ ಟಿ.ಆರ್. ಮಲ್ಲದದ್ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಿನಾಯಕ ಪೂಜಾರ , ಸೆಕ್ಷನ್ ಅಧಿಕಾರಿ ಚೇತನ ಕದಕೋಳ, ಅಭಿಷೇಕ ಪವಾರ, ಸಂತೋಷ ಪಾಟೀಲ ಜಿಲ್ಲಾ ಯೋಜನಾ ವ್ಯವಸ್ಥಾಪಕರು ದೀಪಕ ಕಾಂಬಳೆ, ಡಿಟಿಎಸಯ ಮಲ್ಲಯ್ಯ ಮಠಪತಿ ಮತ್ತು ನವೀನ್ ಕಟವಿ, ಪಿಡಿಒ ಸಂತೋಷ, ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ಆಶಾ ಮತ್ತು ಅಂಗನವಾಡಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group