ನಾಮಸ್ಮರಣೆ ಮಾಡುತ್ತ ಸತ್ಯದ ದಾರಿಯಲ್ಲಿ ನಡೆದರೆ ಮನಶ್ಯಾಂತಿ

Must Read

ಹಳ್ಳೂರ- ಆಸೆ ಆಕಾಂಕ್ಷೆ, ಬಿಟ್ಟು ಅನ್ಯಾಯ ಅಧರ್ಮದ ಮಾರ್ಗ ಹಿಡಿಯದೇ ಸತ್ಯ ಧರ್ಮ ಮಾರ್ಗದಲ್ಲಿ ಸಾಗಿ ಸತ್ಯದ ಕಾಯಕ ಜೊತೆಗೆ ದೇವರ ನಾಮಸ್ಮರಣೆ ಮಾಡುತ್ತಾ ಜೀವನ ಸಾಗಿಸಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಬಂದ ಕಷ್ಟ ಬಯಲಾಗಿ ಜೀವನವು ಸುಖಮಯವಾಗುವುದೆಂದು ಇಂಚಗೇರಿ ಮಠದ ಪೀಠಾಧಿಪತಿ ರೇವಣಸಿದ್ದೇಶ್ವರ ಮಹಾರಾಜರು ಹೇಳಿದರು.

ಅವರು ಹಳ್ಳೂರ ಗ್ರಾಮದ ಶ್ರೀ ಮಾಧವಾನಂದ ಆಶ್ರಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಇಂಚಗೇರಿ ಸಮರ್ಥ ಸದ್ಗುರು ಮಾಧವಾನಂದರು ನೂರಾರು ಭಕ್ತ ಸಮೂಹದೊಂದಿಗೆ ಭಕ್ತಿ ಪ್ರಚಾರ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶ ಸೇವೆಯನ್ನು ಮಾಡಿದ್ದಾರೆ. ಸಂಪ್ರದಾಯ, ಗುರುವಿನ ನಂಬಿದ ಮೇಲೆ ಗುರುವಿನ ಆಜ್ಞೆ ಮೀರದಂತೆ ನಡೆಯಬೇಕು. ನಾವು ಮಾಡಿದ ಸತ್ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಇತ್ತೀಚೆಗೆ ಯುವಕರು ಆಡಂಬರದ ಜೀವನಕ್ಕೆ ಕಾಲಿಟ್ಟು ಮಾನವೀಯ ಗುಣಗಳನ್ನು ಮರೆಯುತ್ತಿದ್ದಾರೆ. ಅಧ್ಯಾತ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಸದ್ಗತಿ ದೊರೆಯುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಮ್ಮಣ್ಣೆಪ್ಪ ಮಹಾರಾಜರು, ಶಂಕರಪ್ಪ ಮಹಾರಾಜರು, ವಸಂತ ಮಹಾರಾಜರು, ರಾಮಣ್ಣ ಮಹಾರಾಜರು ಪ್ರವಚನ ನೀಡಿದರು.

ಈ ಸಮಯದಲ್ಲಿ ಲಕ್ಷ್ಮಣ ಹೊಸಮನಿ, ಗಿರಮಲ್ಲ ಸಂತಿ, ಅಲ್ಲಪ್ಪ ಕೌಜಲಗಿ, ಲಕ್ಷ್ಮಣ ಕುಲಿಗೋಡ, ಸಂಗಪ್ಪ ದುರದುಂಡಿ, ದುಂಡಪ್ಪ ಕತ್ತಿ, ಶಿವಾನಂದ ಹೊಸಮನಿ,  ಬಾಳಯ್ಯ ಹಿರೇಮಠ, ಬಾಬುಲ ಮುಜಾವರ, ಕೆಂಪಣ್ಣ ರುದ್ರಾಪುರ ಸೇರಿದಂತೆ ಅನೇಕರಿದ್ದರು.

ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ. ಶಿಕ್ಷಕ ಅಶೋಕ ಹೆಗ್ಗಾನಿ ನಿರೂಪಿಸಿ, ವಂದಿಸಿದರು. ಸಮರ್ಥ ರಾಮದಾಸ ಮಹಾರಾಜರ ದಾಸಬೋಧ ಪಠಣ, ಮಂಗಳಾರತಿ ಮಾಡಿ ಅನ್ನಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲವಾಯಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group