ಕವನ : ಜೀವ ಪಯಣ

Must Read

ಜೀವ ಪಯಣ

ಬಹು ದೂರವೇನಿಲ್ಲ ನಾವು
ಬಂದು ಹೋಗುವ ದಾರಿ
ತಲುಪಲೂ ಬಹುದು ಅರಿವಿರದೆ
ಹುಟ್ಟಿದಾ ಮರುಕ್ಷಣ.

ಬಂದಾಗ ಅಲ್ಲೊಂದು ಸಂಭ್ರಮ
ಹೋಗುವಾಗಲೂ ಮಗದೊಂದು ಸಂಭ್ರಮ
ನೆನಪಿರದು ಯಾರಿಗೂ ಆದಿನ
ಸುಖ , ಶೋಕಗಳ ಸಮಾಗಮ .

ಧನಿಕ ದರಿದ್ರನಿಗೂ ಒಂದೇ
ಹುಟ್ಟು ಸಾವಿನ ಸಂತೆ
ಅಡಗಿ ಕುಳಿತರೂ ನಮ್ಮ ಬಿಡದು
ಸಾವಿಗಾಗಿ ಮಾಡದಿರು ಚಿಂತೆ.

ಮರಣ ಬರುವ ವರೆಗೂ
ಮಣ್ಣು ಮಹಲಿನ ಮೇಲಾಸೆ
ಮಣ್ಣಾಗಿ ಹೋಗುವ ಎಲ್ಲರಿಗೂ
ಬಾಗಿಲಿರದ ಮನೆ ಮೀಸಲು ಕೂಸೆ.

ನಡೆಯಬೇಕು ಕೊನೆವರೆಗೂ
ಎಡರು ತೊಡರುಗಳ ಮೆಲ್ಲ ದಾಟಿ
ಜೀವ ಇರೋ ವರೆಗೂ
ಬಾಳಬೇಕು ಹೃದಯವಂತಿಕೆ ಮೀಟಿ.

✍️ಡಾ. ಮಹೇಂದ್ರ ಕುರ್ಡಿ, ಗಂಗಾವತಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group