ವಿಶ್ವ ಸೊಳ್ಳೆಯ ದಿನದ ನಿಮಿತ್ತ ನನ್ನ ಈ ಒಂದು ಕವನ…
ಸ್ವಚ್ಛ ಭಾರತ, ಸ್ವಾಸ್ಥ್ಯ ಭಾರತ
ಸೊಳ್ಳೆಯು ನೀ ಕೊಳ್ಳೆ ಹೊಡೆಯುವೆ
ಮನುಜ ರಕ್ತವ ಹೀರುತ
ಮಳ್ಳ ಮಾಡಿ ಹರಡಿ ಸಾಗುವೆ
ರೋಗದ ಸೋಂಕನು ಬೀರುತ
ನಿಂತ ನೀರಲಿ ಬೆಳೆಸಿ ಸಂತತಿ
ನಮಗೆ ಸಂಕಟ ಕೊಡುವೆಯೋ
ಕುಂತರು ನಿಂತರು ಕಚ್ಚಿ ಕಚ್ಚಿ
ನೀನು ಸಂತಸ ಪಡುವೆಯೋ
ಜ್ವರ ಮಲೇರಿಯಾ ಮತ್ತೆ ಪೈಲೇರಿಯಾ
ಡೆಂಗ್ಯೂ ಚಿಕನ್ ಗುನ್ಯವಾ
ಥರ ಥರಹದ ಜ್ವರದ ಬಾಧೆಯ
ಸಹಿಸಬೇಕು ಮಾನವ
ನಿನ್ನ ಮಾತ್ರ ಹೊಣೆಯ ಮಾಡಲು
ಅಂತರಾತ್ಮವು ಒಪ್ಪದು
ನೀರು ನಿಲ್ಲದ ಹಾಗೆ ಮಾಡ್ವುದು
ನಮ್ಮದೇ ಕರ್ತವ್ಯವು
ಸ್ವಚ್ಛ ವಾತಾವರಣ ಇರಲು
ರೋಗಕ್ಕೆಲ್ಲಿದೆ ತಾಣವು?
ಸ್ವಸ್ಥತೆ ಕಾಪಾಡಿಕೊಳ್ಳಲು
ಇದುವೇ ರಾಮ ಬಾಣವು.
✍️ ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.