ಸ್ತಬ್ಧವಾದ ಮಳೆಯ ಅಬ್ಬರ
ಸ್ತಬ್ಧವಾಯಿತು ಮಳೆರಾಯನ ಅಬ್ಬರ
ಮರೆಯಾಯಿತು ಮೋಡಗಳ ರಾಶಿ
ಮತ್ತೆ ಮೂಡಣದಿ
ಕಂಡ ನೇಸರ
ಹೊಂಬಣ್ಣದ ಕಿರಣಂಗಳ ಸೂಸಿ
ಗೂಡು ಸೇರಿದ್ದ ವಿವಿಧ
ಪಕ್ಷಿ ಕಾಶಿ
ಹೊರಬಂದು ಹಾರಿತು
ಪಕ್ಕ ಬೀಸಿ
ಹೂ ಬಿಸಿಲಿಗೆ
ಮೈ ಕೆದರಿ
ಹೊರಡಿಸಿತು
ಕಿಲಿಬಿಲಿ ಕೇಳಿ
ಕಾರ್ಮೋಡದ ಕರಿ ಕತ್ತಲೆಯಲಿ
ಕಳೆದು ಹೋಗಿದ್ದ ತಾರಾವಳಿ
ಮತ್ತೆ ಮಿನುಗುತಿದೆ ನೋಡಿ
ಹೊಸ ಉತ್ಸಾಹ ತಾಳಿ
ಭೂ ತಾಯಿ ಹಸಿರು ಉಡುಗೆಯನುಟ್ಟು
ಶೋಭಿಸುತಿಹಳು
ಹರುಷ ಪಟ್ಟು
ತೂಗಿ ತೊನೆಯಿತು
ಹೊಲದಲ್ಲಿ ಬೆಳೆ
ರೈತನ ಮೊಗದಲಿ
ಮೂಡಿತು ಹೊಸ ಕಳೆ
ಮಳೆಯೊಂದು ಸಲ
ಬಿಸಿಲೊಂದು ಸಲ
ಇದು ನಿತ್ಯ ನಡೆವ
ಋತುಮಾನದ ನೋಟ
ದೇವ ತಾನೆಲ್ಲೋ
ಮರೆಯಲ್ಲಿ ಕುಳಿತು
ಆಡಿಸುತಿಹನು ಈ
ಜಗದ ಆಟ
… ಆರ್. ಎಸ್. ಚಾಪಗಾವಿ
ಬೆಳಗಾವಿ 8317404648