ಮುಧೋಳ- ಜನನ ಮರಣಾತ್ಮಕ ರೂಪವಾಗಿದ್ದಂತ ಸಂಸಾರ ದುಃಖವನ್ನು ನಿವೃತ್ತಿ ಮಾಡಿ ಅಖಂಡ ಸುಖವನ್ನು ಪ್ರಾಪ್ತಿ ಮಾಡುವ ಸದ್ಗುರುವಿನ ಸೇವೆಯನ್ನು , ಚಿಂತನವನ್ನು. ಹಾಗೂ ಭಜನಾ ಪೂಜಾದಿಗಳನ್ನು ಮಾಡಬೇಕೆಂದು ಮುಗಳಖೋಡದ. ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ. ಶರಣಬಸವ ಶಾಸ್ತ್ರಿಗಳು ಹೇಳಿದರು.
ಅವರು ತಾಲೂಕಿನ ಸುಕ್ಷೇತ್ರ ಚೆನ್ನಾಳ ಗ್ರಾಮದಲ್ಲಿ ವಿಶ್ವಮಾನ್ಯ ಪುರುಷ ಬಸವಣ್ಣನವರ ದೇವಾಲಯದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಸಭೆಯಲ್ಲಿ ನಿಜಗುಣರ, ಕನಕದಾಸರ, ಪುರಂದರದಾಸರ, ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ಮಾತನಾಡುತ್ತಾ ಕರುಣಾ ಗುಣವುಳ್ಳ ಗುರುವಿನ ಗುಣಗಾನವನ್ನು ಪ್ರತಿಕ್ಷಣವೂ, ಪ್ರತಿದಿನವು ಮಾಡುವುದು ಈ ಮಾನವ ಜನ್ಮದ ಭೂಷಣ ಎಂದರು.
ಹೊಸಳ್ಳಿಯ ನಾಗನಗೌಡ ಪಾಟೀಲ ಪಾಟೀಲ ತಂಡದವರು ಮಧುರವಾಗಿ ಭಜನೆಯನ್ನ ಮಾಡಿದರು ಹಿರಿಯರಾದ ಉಮೇಶ ಗೋಡಿ, ರಮೇಶ ಅಂಗಡಿ, ಗುರಪ್ಪ ಕುರಬೆಟ್ಟ, ಮಂಜುನಾಥ ಗೋಡಿ, ಪುಂಡಲಿಕ ಪೂಜಾರಿ, ಚನ್ನಪ್ಪ ಗೋಡಿ ಮುಂತಾದವರು ಉಪಸ್ಥಿತರಿದ್ದರು.
ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ನೂರಾರು ಜನ ಭಜನಾ ಪ್ರೇಮಿಗಳು ಭಾಗವಹಿಸಿ ಸಂಭ್ರಮ ಪಟ್ಟರು ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.