ಜಮಖಂಡಿ: ನಗರದ ಐತಿಹಾಸಿಕ ಓಲೆಮಠದ ಲಿಂಗೈಕ್ಯ ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳ ಗದ್ದುಗೆ ಮತ್ತು ಮಂಟಪ ನಿರ್ಮಾಣ ಕಾಮಗಾರಿಗೆ ಶಾಸಕ ಜಗದೀಶ ಗುಡಗುಂಟಿ ಭೂಮಿಪೂಜೆ ನೆರವೇರಿಸಿದರು.
ಓಲೆಮಠದ ಆವರಣದಲ್ಲಿ ಅಂದಾಜು ರೂ.೧೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗದ್ದುಗೆ ಮತ್ತು ಮಂಟಪ ನಿರ್ಮಾಣಕ್ಕೆ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಭೂಮಿಪೂಜೆ ನೆರವೇರಿಸಿದರು.
ಲಿಂ.ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು ಐದು ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದರು. ಕನ್ನಡ ಸಾರಸ್ವತ ಲೋಕಕ್ಕೆ ೮೭ ಕೃತಿಗಳನ್ನು ನೀಡಿದ್ದರು. ೨೦೨೪ರ ನವೆಂಬರ್ ೭ ರಂದು ಲಿಂಗ್ಯಕ್ಯರಾಗಿದ್ದರು.
ಲಿಂಗೈಕ್ಯ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ವೇಳೆಗೆ ಗದ್ದುಗೆ ಮತ್ತು ಮಂಟಪದ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಓಲೆಮಠದ ಆನಂದ ದೇವರು ಶ್ರೀಗಳು ಮಾಹಿತಿ ನೀಡಿದರು.
ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಉದ್ದಿಮೆದಾರ ರಾಜು ಗಸ್ತಿ ಗದ್ದುಗೆ ಮತ್ತು ಮಂಟಪ ನಿರ್ಮಾಣದ ಖರ್ಚು-ವೆಚ್ಚ ಭರಿಸುವ ಭಕ್ತಿಸೇವೆ ಸಲ್ಲಿಸುವ ವಾಗ್ದಾನ ಮಾಡಿದ್ದಾರೆ.
ರಾಯಲ್ ಪ್ಯಾಲೇಸ್ ಸ್ಕೂಲ್‌ನ ಆಡಳಿತಾಧಿಕಾರಿ ಬಸವರಾಜ ನ್ಯಾಮಗೌಡ, ಕಾಡಪ್ಪ ದೇಸಾಯಿ, ಮಲ್ಲಿಕಾರ್ಜುನ ಲಿಂಗನೂರ, ವಕೀಲ ರವಿ ಯಡಹಳ್ಳಿ, ಚನಬಸು ತೆಲಬಕ್ಕನವರ, ಮಲ್ಲಯ್ಯ ಮಠಪತಿ, ಶಿವಯ್ಯ ನಾಗರಾಳಮಠ, ಎಸ್.ವೈ. ಪಾಟೀಲ ಸದಾನಂದ ಬಾಗೇವಾಡಿ, ಎಸ್.ಎಚ್. ಮಠಪತಿ, ಕಾಡು ಮಾಳಿ, ರಾಜೇಶ್ವರಿ ಹಿರೇಮಠ, ಕಸ್ತೂರಿ ಜೈನಾಪುರ, ವಕೀಲ ಸಿ.ಎಸ್. ಬಾಂಗಿ, ಸಿದ್ರಾಮ ಗೊರನಾಳ, ಎ.ಆರ್. ಶಿಂಧೆ, ಸಿದ್ದಯ್ಯ ಕಲ್ಕತ್ತಿಮಠ, ಬಸವರಾಜ ಬಳಗಾರ, ಪ್ರೇಮ ಬಳೂಲಗಿಡದ, ಶಿವಾನಂದ ಕೊಣ್ಣೂರ, ಡಾ.ಟಿ.ಪಿ. ಗಿರಡ್ಡಿ, ಶಂಕರ ಕಾಳೆ, ಗಣೇಶ ಶಿರಗಣ್ಣವರ, ಪ್ರದೀಪ ಮಹಾಲಿಂಗಪುರಮಠ, ಮಲ್ಲು ದಾನಗೌಡ, ರಾಚಯ್ಯ ಮಠಪತಿ, ಅಜಯ ಕಡಪಟ್ಟಿ ಮತ್ತಿತರರು ಇದ್ದರು.