ಗಣಪನ ಹಾಡು
ಚಿಕ್ಕ ಕಣ್ಣು ದೊಡ್ಡ ಕಿವಿಯ
ಏಕದಂತನೆ
ಡೊಳ್ಳು ಹೊಟ್ಟೆ ಆನೆ ಮುಖದ
ಅಭಯ ಹಸ್ತನೆ
ವಿದ್ಯೆ ಬುಧ್ಧಿ ನೀಡಿ ಪೊರೆವ
ವಿಶ್ವವಂದ್ಯನೆ
ವಿಘ್ನಹರನೆ ಶಾಂತಿದೂತನೆ
ನಮಿಪೆ ಗಣಪನೆ
ಭಾದ್ರಪದ ಚೌತಿದಿನ
ಮನೆಗೆ ನಿನ್ನ ತರುವರು
ಸಿಂಗರಿಸಿದ ಮಂಟಪದಲಿ
ಇಟ್ಟು ಸಂತಸ ಪಡುವರು
ಕೆಲವು ದಿನ ಭಕ್ತಿಯಿಂದ
ನಿನ್ನ ಪೂಜೆಗೖವರು
ವಿಘ್ನಗಳನು ದೂರ ಮಾಡು
ಎಂದು ಬೇಡಿಕೊಂಬರು
ಸಿಹಿ ತಿನಿಸಿ ಪಟಾಕಿ ಸಿಡಿಸಿ
ಹರುಷದಿಂದ ನಲಿವರು
ಕೊನೆಗೆ ನಿನ್ನನು ಬಾವಿಗೆಸೆದು
ಕೇಕೆ ಹಾಕಿ ಕುಣಿವರು
ಆರ್. ಎಸ್. ಚಾಪಗಾವಿ
ವಾಣಿ… 8317404648…