ಬೀದರ – ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಭಾಲ್ಕಿ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಮಾಂಜ್ರಾ ನದಿಯ ದಡದಲ್ಲಿ ಇರುವ ಶಿವ ಮಂದಿರ ಭಾಗಶಃ ಮುಳುಗಡೆಯಾಗಿದ್ದು ಮಾಂಜ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ಇನ್ನು ಭಾಲ್ಕಿ ತಾಲೂಕಿನ ಇಂಚೂರ್, ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ಆದರೂ ಸೇತುವೆ ಮೇಲೆ ಪುಂಡರ ಹುಚ್ಚಾಟ ನಡೆದಿದೆ.ಇಂಚೂರು ಸೇತುವೆ ಮೇಲೆ ನಾಲ್ಕು ಐದು ಹುಡುಗರು ಕುಳಿತು ಪುಂಡಾಟ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ.
ಜಿಲ್ಲೆಯಾದ್ಯಂತ ಕಾರ್ಮೋಡ ಆವರಿಸಿದ್ದು ಇನ್ನೂ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆಯೆನ್ನಲಾಗಿದೆ
ವರದಿ : ನಂದಕುಮಾರ ಕರಂಜೆ, ಬೀದರ