ಬೆಳಗಾವಿ – ದಿ: 29 ರಂದು ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಬೆಳಗಾವಿ ಹಾಗೂ ಕಾಲೇಜಿನ ಐ ಕ್ಯೂ ಎ ಸಿ ಘಟಕದ ಸಹಯೋಗದಲ್ಲಿ “ರೇಂಜರ್ ಗಳಿಗೆ ಒಂದು ದಿನದ ಮಾಹಿತಿ ಕಾರ್ಯಾಗಾರ” ಆಯೋಜಿಸಲಾಗಿತ್ತು
ಮುಖ್ಯ ಅತಿಥಿಗಳಾಗಿ ವಿಠ್ಠಲ. ಎಸ್. ಬಿ. ರಾಜ್ಯ ಸಂಘಟನಾ ಕಾರ್ಯದರ್ಶಿಗಳು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬೆಳಗಾವಿ ಇವರು ಆಗಮಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಇತಿಹಾಸ, ಮಹತ್ವ ಹಾಗೂ ರೇಂಜರ್ ಘಟಕದ ಕಾರ್ಯ ಚಟುವಟಿಕೆಗಳು, ಪರೀಕ್ಷೆಗಳು ಶಿಬಿರಗಳು, ಜಾಂಬೂರಿ ಉತ್ಸವ ಮತ್ತು ಅವಕಾಶಗಳ ಕುರಿತು ವಿದ್ಯಾರ್ಥಿನಿಯರಿಗೆ ಸವಿಸ್ತಾರವಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಆರ್ ಪಾಟೀಲ ವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಉದ್ದೇಶ ತಿಳಿಸುತ್ತಾ ಸಮವಸ್ತ್ರದ ಮಹತ್ವ ತಿಳಿಸಿದರು.
ಕಾಲೇಜಿನಲ್ಲಿ ರೇಂಜರ್ ಘಟಕಕ್ಕೆ ಸೇರುವುದರಿಂದ ನಾಯಕತ್ವ ಗುಣ, ಧೈರ್ಯ ಸಾಹಸ ಮನೋವೃತ್ತಿಗಳು ಬೆಳೆಯುತ್ತವೆ. ಕಾರಣ ಎಲ್ಲರೂ ಈ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ ವಿಭಾಗದ ಸಂಚಾಲಕರು ಹಾಗೂ ರೇಂಜರ್ ಲೀಡರ್ ಆದ ಡಾ ಡಾ. ಬಿ. ಎಸ್ ಗಂಗನಳ್ಳಿ ಅವರು ಮಾಡಿದರು. ವೇದಿಕೆ ಮೇಲೆ ಕಾಲೇಜಿನ ಐ ಕ್ಯೂ ಎ ಸಿ ಘಟಕದ ಸಂಯೋಜಕರಾದ
ಡಾ. ಜಯಶೀಲಿ. ಜಿ ಉಪಸ್ಥಿತರಿದ್ದರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಲಕ್ಕಪ್ಪ ಬೂದನೂರ, ಡಾ.ಪ್ರವೀಣ್ ಕೋರ್ಬು ಡಾ. ಪಿ.ಎ ಘಂಟಿ , ಶ್ರೀಮತಿ ಸವಿತಾ ಚೌಗಲೆ ಹಾಗೂ ಇನ್ನುಳಿದ ಬೋಧಕ ಆಡಳಿತ ವರ್ಗದ ಸಿಬ್ಬಂದಿಯವರು ಭಾಗವಹಿಸಿದ್ದರು ಪ್ರಾರ್ಥನಾ ಗೀತೆಯನ್ನು ಕುಮಾರಿ ಹೀನಾ ಶೇಕ್ ಹಾಗೂ ಸಂಗಡಿಗರು ಹಾಡಿದರು. ನಿರೂಪಣೆಯನ್ನು ಕುಮಾರಿ ದಾನೇಶ್ವರಿ ಜಮಖಂಡಿ ಮಾಡಿದರು. ವಂದನಾರ್ಪಣೆಯನ್ನು ಕುಮಾರಿ ದೀಪಿಕಾ ಪಾಟೀಲ ಮಾಡಿದರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ರೇಂಜರ್ ತಂಡದವರು ಮಾಡಿದರು.

