ವಿವೇಕವಾಣಿ

Must Read

ವಿವೇಕವಾಣಿ

ಎದ್ದೇಳಿಯನ್ನುವ ವಿವೇಕವಾಣಿಯು
ಮಲಗಿದ ಮನಗಳ ಎಬ್ಬಿಸಿತು
ಭಾರತ ಮಾತೆಯ ಋಣವನು ತೀರಿಸೊ
ಜನತೆಗೆ ಸಮಯವ ಒದಗಿಸಿತು.||

ಸನ್ಯಾಸಿ ವೀರನು ಧೀರನು ನರೇಂದ್ರ
ಸನಾತನ ಧರ್ಮದ ಜ್ಯೋತಿಯು
ಕಾಶ್ಮೀರದಿಂದಲಿ ಕನ್ಯಾಕುಮಾರಿಯವರೆಗೂ
ಲಬಿಸಿತು ಸ್ಪೂರ್ತಿಯು||

ದೇಶದ ಸಂಸ್ಕೃತಿ ವಿಶ್ವಕೆ ತೋರಲು
ಚಿಕಾಗೊ ನಗರಕೆ ಬಂದಿಹರು
ಹಿಂದೂ ಧರ್ಮವು ಮಿಕ್ಕೆಲ್ಲ ಧರ್ಮಕೂ
ಬುನಾದಿಯಂಬುದ ತೋರಿಹರು||

ವಿಶ್ವವೆ ಬೆರಗಾಗಿ ಸತ್ಯವರಿಯುತ
ಮೂಗಿನ ಮೇಲೆಯೆ ಬೆರಳಿಟ್ಟಿತು.
ಕಾಶಿಸೆ ಧರ್ಮದ ಜ್ಯೋತಿಯ
ವಿಶ್ವಕೆ
ನಾಡಿನ ಕೀರ್ತಿ ಮುಗಿಲು ಮುಟ್ಟಿತು||

ಯುವಶಕ್ತಿ ಒಂದಾಗಿ ನಡೆಯೆ ಮುಂದೆ
ಸೋಲದು ಕಾಣದು ಎಂದೆಂದೂ
ಒಗ್ಗಟ್ಟೆ ಬಲವು ಅರಿಯಿರಿ ಯುವಕರೆ
ದೇಶದ ಪ್ರಗತಿಗೆ ತಂತ್ರವೆಂದು||

ಶ್ರೀ ಈರಪ್ಪ ಬಿಜಲಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group