ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದಿಂದ ಮನವಿ ಪತ್ರ ಸಲ್ಲಿಕೆ

Must Read

ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಕಾಲಂ ಗಾಗಿ ರಾಜ್ಯದ ಹಲವು ಕಡೆಗೆ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರ ಆದೇಶದಂತೆ ಕರ್ನಾಟಕ ಜಿಲ್ಲಾ ತಾಲೂಕಾ ಘಟಕಗಳು ಶನಿವಾರ ವಿಜಯಪುರ ಜಿಲ್ಲಾಧಿಕಾರಿಯವರಿಗೆ, ಬೆಳಗಾವಿ ಜಿಲ್ಲಾಧಿಕಾರಿಯವರಿಗೆ ಮುದ್ದೇಬಿಹಾಳ ತಾಲೂಕಿನ ಬಸವ ಮಹಾಮನೆಯ ಜೊತೆಗೆ ಅಲ್ಲಿನ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಿಂದಗಿ, ಬಾದಾಮಿ, ಶಹಾಪುರ, ಹುಬ್ಬಳ್ಳಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬಾಗಲಕೋಟೆ ಮುಂತಾದ ಕಡೆಗಳಲ್ಲಿ ಬಸವ ಭಕ್ತರು ಲಿಂಗಾಯತ ಧರ್ಮದ ಒಳಪಂಗಡಗಳ ಜಾತಿ ಸಮೀಕ್ಷೆಯ ಮೂಲಕ ಒಟ್ಟು ಲಿಂಗಾಯತರ ಜನ ಸಂಖ್ಯೆಯನ್ನು ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಮಂಡಳಿ ಮತ್ತು  ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಜಿಲ್ಲಾಧಿಕಾರಿ ಮತ್ತು ತಾಲೂಕಾ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಗಿದೆ.

ಒಂದು ವೇಳೆ ಲಿಂಗಾಯತ ಧರ್ಮದ ಜನರಿಗೆ ಅನ್ಯಾಯವಾದಲ್ಲಿ ಉಗ್ರ ರೂಪದ ಹೋರಾಟ ಮಾಡುವುದಾಗಿ ಬಸವ ಭಕ್ತರು ಎಚ್ಚರಿಸಿದರು.

ವಿಜಯಪುರದಲ್ಲಿ ಸಿದ್ದಪ್ಪ ಪಡನಾಡ
ಪ್ರೊ ಆರ್ ಎಸ್ ಬಿರಾದಾರ ರತ್ನತ್ಕ ಬಿರಾದಾರ ಡಾ. ಶಾರದಾಮಣಿ ಹುನಶಾಳ,ಜಿ ಬಿ ಸಾಲಕ್ಕಿ, ಶಿವಲಿಂಗಪ್ಪ ಕಲಬುರ್ಗಿ, ಮುದ್ದೇಬಿಹಾಳದಲ್ಲಿ ಬಸವರಾಜ ಕೋರಿ,  ಚಂದ್ರಶೇಖರ ಇಟಗಿ, ಎ ವಿ. ಎನ್.ಕಿಣಗಿ,
ಬೆಳಗಾವಿಯಲ್ಲಿ ಸಾಹಿತಿ ಸುಧಾ ಪಾಟೀಲ ಶರಣೆ ಶೈಲಜಾ ಬಿಂಗೆ ವಿದ್ಯಾ ಹುಂಡೇಕರ ಪ್ರೊ ರಾಜನಂದಾ ಗಾರ್ಗಿ ನೈನಾ ಗಿರಿಗೌಡರ ಪ್ರಸಾದ ಹಿರೇಮಠ ಅಕ್ಕಮಹಾದೇವಿ ತೆಗ್ಗಿ, ಬಾದಾಮಿಯಲ್ಲಿ ಪ್ರೊ. ಶಾರದಾ ಪಾಟೀಲ
ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಕೆ.ಬಿ ಮರಿಸ್ವಾಮಿ, ಹುಬ್ಬಳ್ಳಿಯಲ್ಲಿ ಹನುಮಾಕ್ಷಿ ಗೋಗಿ, ಶಹಾಪುರದಲ್ಲಿ ಕಲ್ಲಪ್ಪ ಹಂಗರಗಿ,
ಬಾಗಲಕೋಟೆಯಲ್ಲಿ ಗೌರಮ್ಮ ನಾಶಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಿಂದಗಿಯಲ್ಲಿ ಶ್ರೀ ಪ್ರಭುಲಿಂಗ ಸ್ವಾಮೀಜಿ -ಹೀಕನಗುತ್ತಿ ಮತ್ತು ನೂರಾರು ಜನರು ಸಾಹಿತಿ ಬಸಮ್ಮ ಭರಮಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group