ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕೊಳಚಿಯಲ್ಲಿ ಇಂದು ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು
ಧ್ವಜಾರೋಹಣವನ್ನು ಗ್ರಾಮದ ಮಾಜಿ ಅಧ್ಯಕ್ಷರು ಶ್ರೀಮತಿ ಆಲೂರು ಗಂಗಮ್ಮ ಹಾಗೂ ಗ್ರಾಮಪಂಚಾಯ್ತಿ ಸದಸ್ಯೆ ಶ್ರೀಮತಿ ಓಬಳ್ದಾರ್ ರೇಖಾ ರವರು ನೆರವೇರಿಸಿದರು. ಜೊತೆಗೆ ಇಂದು ವಿಶ್ವಕರ್ಮ ಜಯಂತಿಯನ್ನು ಇದೇ ಸಂದಭ೯ ಪೂಜಾ ಕಾರ್ಯಕ್ರಮದ ಮೂಲಕ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿರಿಯ ಮುಖ್ಯ ಗುರುಗಳು ಮಧುನಾಯ್ಕ ಎಲ್ ರವರು ವಹಿಸಿದ್ದರು.- ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಈ ಶಾಲೆಯ ಎಲ್ಲಾ ಶಿಕ್ಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

