ಸುಮಾರು ೮.೧೨ ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ
ಬೀದರ – ಪೊಲೀಸರ ಕಣ್ಣು ತಪ್ಪಿಸಿ ಹತ್ತಿಯ ಹೊಲದಲ್ಲಿ ಗಾಂಜಾ ಬೆಳಸಿದ್ದ ಖದೀಮರು ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಡ್ರೋಣ್ ಕ್ಯಾಮರಾದಿಂದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನ ಪತ್ತೆ ಹಚ್ಚಿದ್ದು ಅಕ್ರಮ ಗಾಂಜಾ ಗಿಡ ಬೆಳೆಗಾರರಿಗೆ ಮತ್ತು ಮಾರಾಟಗಾರರಿಗೆ
ಸಿಂಹಸ್ವಪ್ನವಾದ ಬೀದರ್ ಪೊಲೀಸರು ಕಂಗಾಲಾದ ಖದೀಮರು.
ಔರಾದ್ ತಾಲೂಕಿನ ಕರಂಜಿ (ಬಿ) ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದರು.
ಯಾರಿಗೂ ಕಾಣಿಸದಂತೆ ಹತ್ತಿಯ ಹೊಲದಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸರು ಜಮೀನಿನಲ್ಲಿ ಬೆಳೆದಿದ್ದ ಸುಮಾರು ೮.೧೨ ಲಕ್ಷ ರೂಪಾಯಿ ಮೌಲ್ಯದ ೮ ಕೆಜಿ ತೂಕದ ೪೬ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಖಚಿತ ಮಾಹಿತಿ ಹಿನ್ನೆಲೆ ಎಸ್‌ಪಿ ಪ್ರದೀಪ್ ಗುಂಟಿ ಸಮ್ಮುಖದಲ್ಲಿ, ಪಿಎಸ್‌ಐಗಳಾದ ಅಂಬರೀಶ್ ವಾಗ್ಮೋಡೆ, ಚಂದ್ರಶೇಖರ್ ನಿರ್ಣೆ ನೇತೃತ್ವದಲ್ಲಿ ದಾಳಿ ನಡೆಸಿದರು.
ಬೀದರ್ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ರಮ ಗಾಂಜಾ ದಂಧೆಕೋರರನ್ನು ಪತ್ತೆ ಹಚ್ಚಿ ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಎಸ್‌ಪಿ ಪ್ರದೀಪ್ ಗುಂಟಿ ಖಡಕ್ ಎಚ್ಚರಿಕೆ ನೀಡಿದ್ದು, ಜನರು ಮಾದಕ ವಸ್ತುಗಳಿಂದ ದೂರವಿರಬೇಕು…ಈ ರೀತಿ ಅಕ್ರಮ ಚಟುವಟಿಕೆಯಲ್ಲಿ ಭಾಗವಹಿಸಿರೋದು ಗೊತ್ತಾದ್ರೆ ಜನರು ಪೊಲೀಸರ ಗಮನಕ್ಕೆ ತರಬೇಕು. ಬೀದರ್‌ನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ ಹೀಗಾಗಿ, ಪೊಲೀಸ್ ಇಲಾಖೆ ಜೊತೆ ಸಾರ್ವಜನಿಕರು ಕೈಜೋಡಿಸುವಂತೆ ಎಸ್‌ಪಿ ಪ್ರದೀಪ್ ಗುಂಟಿ ಮನವಿ ಮಾಡಿದ್ದಾರೆ.

