ಹಳ್ಳೂರ – ಶತಮಾನದ ಇತಿಹಾಸ ಹೊಂದಿರುವ ಹಳ್ಳೂರ ಗ್ರಾಮದಲ್ಲಿ ನಡೆದ ಶ್ರೀ ಪಾಂಡುರಂಗ ರುಕ್ಮಿಣಿ ದೇವರ ಸಪ್ತಾಹ ವು 3 ದಿನಗಳ ಕಾಲ ಅತೀ ವಿಜೃಂಭಣೆಯಿಂದ ನಡೆಯಿತು.
ಸೋಮವಾರ ಮುಂಜಾನೆ ಸಂತರ ಕೀರ್ತನೆ , ಭಜನೆ ನಡೆದು ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆರತಿ, ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.ನೂರಾರು ಸಂತ ಶರಣರ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂತರು ಆನೇಕ ದೇವರ ಹೆಸರುಗಳ ವೇಷ ಭೂಷಣ ಧರಿಸಿ ಜೀವನದಲ್ಲಿ ದಾನ ಧರ್ಮ ಒಳ್ಳೆಯ ಕೆಲಸ ಕಾರ್ಯ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಕೆಟ್ಟ ಕರ್ಮಾದಿಗಳನ್ನು ಮಾಡಿದವರು ಯಮನ ಪಾದಕ್ಕೆ ಸೇರಿ ಕಷ್ಟ ಅನುಭವಿಸುವ ಸನ್ನಿವೇಶಗಳನ್ನು ಹಾಗೂ ದೇವರ ಮಹಿಮೆಯನ್ನು ಕೂಡಾ ಸಂತರು ತೋರಿಸಿಕೊಟ್ಟರು. ದೇವರಿದ್ದಾನೆ ಎಂಬುದು ಭಕ್ತರಿಗೆ ಅರಿವು ಮೂಡಿಸುವ ಕಾರ್ಯವನ್ನು ಸಹ ಮಾಡಿದರು. ಅದರಲ್ಲಿ ದುರ್ಗಾ ದೇವಿ ವೇಷ ಭೂಷಣ ಧರಿಸಿದ ಸಂತರ ದೇವಿ ಪರಕಾಯ ಪ್ರವೇಶ ಮಾಡಿ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಯಿತು.
ಈ ವರ್ಷದ ಸಪ್ತಾಹವು ಬಹಳ ವಿಶೇಷವಾಗಿ ಜರುಗಿತು. ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು ಅದರಲ್ಲಿ ಮಜ್ಜಿಗೆ ಸಾಂಬಾರು ಊಟದಲ್ಲಿ ರುಚಿಕರ ತಿನಿಸು ಎಂದು ಮೊದಲಿನಿಂದಲೂ ವಾಡಿಕೆಯಿದೆ. ದಿಂಡಿ ಉತ್ಸವ,ಸಪ್ತಾಹ ಕಾರ್ಯಕ್ರಮವು ಸಂತ, ಶರಣರ ಗುರು ಹಿರಿಯರ ಸಮ್ಮುಖದಲ್ಲಿ ನೆರವೇರಿತು.

