ಸಾಯಿ ಮಂದಿರದಲ್ಲಿ ವಿಶ್ವ ಹೃದಯ ದಿನಾಚರಣೆ

Must Read

ಮೂಡಲಗಿ : ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಸಾಯಿ ಸೇವಾ ಸಮಿತಿಯಿಂದ ಹೃದಯ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಿಕ್ಕಮಕ್ಕಳ ತಜ್ಞ ಡಾ. ವಿಶಾಲ ಪಾಟೀಲ ಚಾಲನೆ ನೀಡಿ ಮಾತನಾಡಿದರು.

ಅವರು ಆಹಾರದಲ್ಲಿ ಮಿತವಾಗಿ ಎಣ್ಣೆ ಬಳಸಿ, ಕರಿದ ಪದಾರ್ಥಗಳಿಂದ ಹಾಗೂ ದುಶ್ಚಟಗಳಿಂದ ದೂರವಿರಿ, ನಿತ್ಯ ನಗೆ, ನಡಿಗೆ, ಪ್ರಾಣಾಯಾಮ ಯೋಗ ದೊಂದಿಗೆ ಸಾಯಿ ಧ್ಯಾನ ಮಾಡುತ್ತ ಉಲ್ಲಾಸ ಉತ್ಸಾಹದ ಜೀವನ ಸಾಗಿಸಿ ಆರೋಗ್ಯವಂತರಾಗಿ ಇರಲು ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ಸಿ.ಎಂ ಹಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಕ್ಕಳು ಸಾಯಿ ಮಂದಿರದಿಂದ ಸಂಗೊಳ್ಳಿ ರಾಯಣ್ನ ವೃತ್ತ, ಕಲ್ಮೇಶ್ವರ ವೃತ್ತಗಳ ಮೂಲಕ ಜಾಗೃತಿ ಜಾಥಾ ನಡೆಸಿದರು. ಬಸವರಾಜ ಮುರಗೋಡ ಪ್ರಸಾದ ಸೇವಾ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ಡಾ.ಪದ್ಮಾ ಪಾಟೀಲ, ಕೆ.ಬಿ.ನಾವಳ್ಳಿ, ಹನುಮಂತ ಸೋರಗಾಂವಿ, ಬಿ.ಎಮ್.ನಂದಿ, ಬಿ.ಎಸ್.ಹಂಚಿನಾಳ, ಭೀಮಶಿ ನಾಯ್ಕ, ಬಿ.ಐ. ಹಿರೇಮಠ, ಮಲ್ಲಿಕಾರ್ಜುನ ಹಂಚಿನಾಳ, ಜಗದೀಶ ಸೋನವಾಲಕರ, ದಾನಪ್ಪ ಶೀಲವಂತ ಲಕ್ಷ್ಮಣ ಕಂಕಣವಾಡಿ, ಬಸವಂತ ಬಡಿಗೇರ, ಡಿ.ಬಿ.ಮುತ್ನಾಳ, ಭಾರತಿ ಮಿಲಾನಟ್ಟಿ, ಹೇಮಾ ನಾವಳ್ಳಿ, ಗೀತಾ ಬೂದಿಹಾಳ, ಸುಮಿತ್ರಾ ಖಾನಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group