ಹಳ್ಳೂರ- ಭೂಮಿಯ ಮೇಲೆ ಸಂತ ಶರಣರಿಗೆ ಸಂಕಷ್ಟ, ಭೂಮಿಯ ಮೇಲೆ ಪಾಪ ಹೆಚ್ಚಾದಾಗ ದುಷ್ಟರ ಸಂಹಾರಕ್ಕೆ ಶಿಷ್ಟರ ಪರಿಪಾಲನೆ ಮಾಡಲು ದೇವಿಯು ಅವತಾರ ತಾಳಿ ಬಂದಿರುತ್ತಾರೆ.ಪ್ರಜೆಗಳ ಹಿತರಕ್ಷಣೆ ಕಾಪಾಡುವುವರೆ ನಿಜವಾದ ನಾಯಕರು ಒಬ್ಬರ ಮನ ನೋಯಿಸಿ ಬೆಂಕಿ ಹಚ್ಚುವ ಕೆಲಸ ಮಾಡುವ ಮೊದಲು ಬೆಂಕಿ ತಮಗೂ ತಟ್ಟುತ್ತದೆಂದು ನೆನಪಿಟ್ಟುಕೊಳ್ಳಬೇಕೆಂದು ಹೊಸ ಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯ ಶ್ರೀಗಳು ಹೇಳಿದರು.
ಗ್ರಾಮದ ದ್ಯಾಮವ್ವಾ ದೇವಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದ ಶ್ರೀ ದೇವಿ ಪುರಾಣ ಕಾರ್ಯಕ್ರಮದಲ್ಲಿ ರಾಕ್ಷಸರು ದೇವಿಯು ಮೇಲೇ ಯುದ್ಧ ಮಾಡಲು ಪ್ರಯತ್ನಿಸಿದಾಗ ದೇವೀ ಅಸ್ತ್ರ ಪ್ರಯೋಗಿಸಿ ದುಮ್ರಲೋಚನಂತ ದುಷ್ಟ ರಾಕ್ಷಸರನ್ನು ಸೆದೆ ಬಡಿದು ನಾಶ ಮಾಡುತ್ತಾರೆ. ಸಂಕಲ್ಪ ಶಕ್ತಿಯಿಂದ ಹಸಿವೂ ನೀಗಿಸುವ ಶಕ್ತಿ ಪಾರ್ವತಿ ಪರಮೇಶ್ವರನಲ್ಲಿದೆ ಒಳ್ಳೆಯದಕ್ಕೆ ಮಾತ್ರ ಪನ ತೊಡಬೇಕು ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಒಳ್ಳೆಯದಕ್ಕೆ ಒಳ್ಳೆಯವರಿಗೆ ಪ್ರೋತ್ಸಾಹ ನೀಡಬೇಕು ದಾಸೋಹಕ್ಕೆ ಸಹಾಯ ನೀಡಬೇಕು. ಬಸವಣ್ಣವರು ಅನ್ನಕ್ಕೆ ಬ್ರಹ್ಮನ ಸ್ಥಾನ ನೀಡಿದ್ದಾರೆ ಇದ್ದಷ್ಟರಲ್ಲಿ ಹಂಚಿ ತಿನ್ನುವ ಆನಂದ ಇನ್ನೋದರಲಿಲ್ಲ. ಮತ್ತೊಬ್ಬರ ಏಳ್ಗೆಯನ್ನು ಸಹಿಸದವರು ರಾಕ್ಷಸ ಕುಲದವರು. ಒಳ್ಳೆಯವರಿಗೆ ಕಷ್ಟ ಕೊಟ್ಟವರ ಪರಿಸ್ಥಿತಿ ಅಧೋಗತಿ ಹೊಂದುತ್ತದೆ. ಸತ್ಯ ಧರ್ಮವಿದ್ದಕಡೆ ಜಯವಾಗಿ ದೇವರ ಆಶೀರ್ವಾದ ವಿರುತ್ತದೆ. ವಿದೇಶಿಗರು ನಮ್ಮ ದೇಶದ ಸಂಸ್ಕೃತಿಯನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತಾರೆ .ಮಹಿಳೆಯರು ಶ್ರೇಷ್ಠವಾದ ದೇಶದ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕೆಂದು ಹೇಳಿದರು.
ದೇವಾದಿಗಳ ವೇಷಭೂಷಣ ಧರಿಸಿದ ಮುದ್ದು ಮಕ್ಕಳಿಗೆ ಉಡಿ ತುಂಬಿದರು.ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು. ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ, ನಿರೂಪಿಸಿದರು. ಗುರು ಹಿರಿಯರು ಉಪಸ್ಥಿತರಿದ್ದರು.