ಭಗವದ್ಗೀತೆ ಪಠಣದಿಂದ ಜೀವನ ಪಾವನ : ವಿ ವಿ ಪತ್ತಾರ

Must Read

ಹುನಗುಂದ: ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹುನಗುಂದ ಇವರು ನವರಾತ್ರಿಯ ಅಂಗವಾಗಿ ಮಕ್ಕಳಿಗೆ ಭಗವದ್ಗೀತೆ ಶ್ಲೋಕ ಪಠಣ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹುನುಗುಂದ ತಾಲೂಕ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ವಿ ವಿ ಪತ್ತಾರ ಭಗವದ್ಗೀತೆಯನ್ನು ಪ್ರತಿನಿತ್ಯ ಶ್ರವಣ ಮಾಡುವದರಿಂದ ಮನುಷ್ಯನ ಜೀವನ ಪಾವನವಾಗುತ್ತದೆ ಎಂದು ಹೇಳಿದರು

ಸಾವಿರಾರು ವರ್ಷಗಳ ಹಿಂದೆ ಪಾಂಡವರು ಮತ್ತು ಕೌರವರ ಮಧ್ಯದಲ್ಲಿ ನಡೆದ ಯುದ್ಧದ ಸಮಯದಲ್ಲಿ ಅರ್ಜುನ ಯುದ್ಧ ಭೂಮಿಯಲ್ಲಿ ಬಂದು ನಿಂತಾಗ ವಿರೋಧಿಗಳ ಸಾಲಿನಲ್ಲಿ ರಕ್ತ ಸಂಬಂಧಿಗಳು ವಿದ್ಯಾ ಕಲಿಸಿದ ಗುರುಗಳನ್ನು ಕಂಡು ತನ್ನ ಗಾಂಢೀವವನ್ನು ಕೆಳಗಿಟ್ಟು ಯುದ್ಧ ಮಾಡಲು ನಿರಾಕರಿಸುತ್ತಾನೆ ಆಗ ಕೃಷ್ಣ ಪರಮಾತ್ಮ ಅರ್ಜುನನನಿಗೆ ಹೇಳಿದ ನೀತಿ ಪಾಠ ಭಗವದ್ಗೀತೆಯಲ್ಲಿ ಅಡಗಿದೆ ಎಂದು ಹೇಳಿದರು.

ಕೇವಲ ಅದು ಅರ್ಜುನನಿಗೆ ಮಾತ್ರ ಹೇಳಿದ ನೀತಿ ಪಾಠವಲ್ಲ ಸಾರ್ವಕಾಲಿಕ ಸಾಧನ ಇದಾಗಿದೆ ಅದಕ್ಕಾಗಿ ನಾವೆಲ್ಲರೂ ನಮ್ಮ ಮಕ್ಕಳಿಗೆ ಪಠ್ಯಪುಸ್ತಕಗಳೊಂದಿಗೆ ಭಗವದ್ಗೀತೆ ಓದಲು ಕೊಡುದರಿಂದ ಸಮಾಜದಲ್ಲಿ ಧರ್ಮ ನಿಷ್ಠರಾಗಿ ಜೀವನದಲ್ಲಿ ಎಂತಹದೆ ತೊಂದರೆಗಳು ಬಂದರೆ ಎದುರಿಸಿ ಬದಕುವ ಸಾಮರ್ಥ್ಯ ಹೊಂದುತ್ತಾರೆ ಎಂದರು

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ನಾರಾಯಣ ಪತ್ತಾರ, ಭಗವದ್ಗೀತೆ ಸಂಪೂರ್ಣ ಸಂಸ್ಕೃತದಲ್ಲಿ ಇದ್ದು ಪ್ರತಿನಿತ್ಯ ನಾವೆಲ್ಲರೂ ಭಗವದ್ಗೀತೆ ಪಠಣ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅದಕ್ಕಾಗಿ ನಾವೆಲ್ಲರೂ ನಮ್ಮ ನಮ್ಮ ಮಕ್ಕಳಿಗೆ ಭಗವದ್ಗೀತೆಯನ್ನ ಓದಿಸುವದರ ಜೊತೆಗೆ ನಾವು ಪ್ರತಿನಿತ್ಯ ಭಗವದ್ಗೀತೆಯಲ್ಲಿರುವ ಶ್ಲೋಕಗಳನ್ನು ಪಠಣ ಮಾಡಬೇಕೆಂದರು

ಸಾನ್ನಿಧ್ಯ ವಹಿಸಿ ಮಾತನಾಡಿದ ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಗುರಪ್ಪಯ್ಯ ಮಹಾಸ್ವಾಮಿಗಳು ಸಂಸ್ಕೃತ ಭಾಷೆ ಕಠಿಣವಾದ ಭಾಷೆ  ಭಗವದ್ಗೀತೆ ಸಂಸ್ಕೃತದಲ್ಲಿ ಇರುವುದರಿಂದ  ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಿಂತ ಮುಂಚೆ ಸ್ಪಷ್ಟ ಉಚ್ಚಾರ ಗಟ್ಟಿ ಧ್ವನಿಯಲ್ಲಿ ಶ್ಲೋಕ  ಹೇಳುವುದನ್ನು ರೂಢಿಸಿಕೊಳ್ಳಬೇಕು ಆಗ ಸ್ಪರ್ಧೆಯಲ್ಲಿ ಜಯ ಕಟ್ಟಿಟ್ಟ ಬುತ್ತಿ ಎಂದರು

ವೇದಿಕೆ ಮೇಲೆ ಮೌನೇಶ ಪುರೋಹಿತ ಶಾಂತಾಬಾಯಿ ಪತ್ತಾರ ಉಪಸ್ಥಿತರಿದ್ದರು  ನಟರಾಜ ಬಡಿಗೇರ ನಿರೂಪಿಸಿದರು ಪ್ರಾಸ್ತಾವಿಕವಾಗಿ ನರಸಿಂಹ ಪತ್ತಾರ ಮಾತನಾಡಿದರು ಅಶೋಕ ದೊಡ್ಡಪತ್ತಾರ ವಂದಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group