ಕವನ : ವಿಜಯದಶಮಿ

Must Read

ವಿಜಯದಶಮಿ

ನವರಾತ್ರಿ ಇಂದು ಸಮಾಪ್ತಿಗೊಂಡು
ಬಂದಿತು ವಿಜಯದಶಮಿ
ನವಶಕ್ತಿ ರೂಪಿಣಿ ನವದುರ್ಗೆಯರ
ನಮಿಸುವ ಎಲ್ಲರು ಬನ್ನಿ

ಬನ್ನಿ ಮಹಾಕಾಳಿಯ ಭಕ್ತಿಯಿಂದಲಿ
ಪೂಜಿಸಿ ಬನ್ನಿಯ ಮುಡಿವ
ಹೊನ್ನ ಸಮಾನವು ಈ ದಿನ ಬನ್ನಿಯು
ಹಂಚುತ ಹರುಷವ ಪಡೆವ

ದುಷ್ಟರ ಶಿಕ್ಷಣ ಶಿಷ್ಟರ ರಕ್ಷಣ
ಎನ್ನುವ ಮಾತು ಸತ್ಯ
ಮಿತ್ಯದ ಮೇಲೆ ಸತ್ಯದ ಗೆಲುವಿನ
ಸಂಕೇತವೇ ಈ ಹಬ್ಬ

ನಾಡಿನ ಸಮಸ್ತ ಬಾಂಧವರಿಗೆಲ್ಲ
ವಿಜಯದಶಮಿ ಶುಭಾಶಯ
ಬೇಡುವ ಚಾಮುಂಡೇಶ್ವರಿ ತಾಯಿಗೆ
ಶಾಂತಿ ಸುಭೀಷ್ಟತೆ ಅಭಯ.

ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group