ಅಡ್ವೈಸರ್ ಸಾಹಿತ್ಯ ಪ್ರಶಸ್ತಿ ೨೦೨೫ ಕ್ಕೆ ೧೦ ಲೇಖಕರು ಆಯ್ಕೆ

Must Read

ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ ೨೦೨೫ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿ, ಎಂಟು ವಿಭಾಗಗಳಲ್ಲಿ ೧೦ ಪ್ರಶಸ್ತಿಗಳನ್ನು ಕಳೆದ ೧೮ ವರ್ಷದಿಂದ ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯದ ಈ ಕೆಳಗಿನ ಪ್ರಕಾರಗಳಲ್ಲಿ ನೀಡುವ ಪ್ರಶಸ್ತಿಗಳಿಗೆ ಹಿರಿಯ-ಕಿರಿಯ ಲೇಖಕರುಗಳನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ನೇತೃತ್ವದ ತೀರ್ಪುಗಾರರ ಮಂಡಳಿ ಕೃತಿಗಳನ್ನು ಆಯ್ಕೆ ಮಾಡಿದ್ದು, ಎಲ್ಲಾ ೧೦ ಪ್ರಶಸ್ತಿಗಳಿಗೆ ಸಮನಾಗಿ ನಗದು ಮೂರು ಸಾವಿರ ರೂಪಾಯಿಗಳು ಮತ್ತು ಪ್ರಶಸ್ತಿ ಪತ್ರ ಹೊಂದಿರುತ್ತದೆ ಎಂದು ಸಂಪಾದಕರಾದ ಸಿ.ಬಸವರಾಜುರವರು ತಿಳಿಸಿರುತ್ತಾರೆ.

ಕವನ ಸಂಕಲನ ವಿಭಾಗದಲ್ಲಿ ೧. ಡಾ.ಎಂ.ಎ.ಪದ್ಮನಾಭ ಹೆಬ್ರಿ ಸ್ಮರಣಾರ್ಥ ಪ್ರಶಸ್ತಿ – ಚನ್ನಪ್ಪ ಅಂಗಡಿ ರವರ ‘ಇನ್ನು ಕೊಟ್ಟೆನಾದೊಡೆ’ ೨. ಜಾನಪದ ತಜ್ಞ ದಿ.ಪ್ರೊ.ಡಿ.ಲಿಂಗಯ್ಯರವರ ಸ್ಮರಣಾರ್ಥ ಪ್ರಶಸ್ತಿ – ಎಸ್ ನಾಗಶ್ರೀ ಅಜಯ್ ರವರ ‘ನಾಲ್ಕು ಋತುಗಳ ಹುಡುಗಿ’
ಕಥಾ ಸಂಕಲನ ವಿಭಾಗದಲ್ಲಿ ೩. ವಿಜಯೇಂದ್ರ ಬಂಧುಕಾರ ಸ್ಮರಣಾರ್ಥ ಪ್ರಶಸ್ತಿ – ಮಲ್ಲಿಕಾರ್ಜುನ ಶೆಲ್ಲಿಕೇರಿರವರ ‘ಹವೇಲಿ ದೊರೆಸಾನಿ’
ಚುಟುಕ ಸಂಕಲನ(ಗಜಲ್) ವಿಭಾಗದಲ್ಲಿ ೪. ಶ್ರೀಮತಿ ವನಜಾಕ್ಷಮ್ಮ ಅಂಗಡಿಹಟ್ಟಿ ಪುಟ್ಟಸ್ವಾಮಪ್ಪರವರ ಸ್ಮರಣಾರ್ಥ ಪ್ರಶಸ್ತಿ – ಲಕ್ಷ್ಮಿಕಾಂತ ಎಲ್ ವಿ ರವರ ‘ಕಂದೀಲು ಹಚ್ಚುವ ಮುನ್ನ ’ ವಚನ ಸಾಹಿತ್ಯ ವಿಭಾಗದಲ್ಲಿ ೫. ಶ್ರೀಮತಿ ಕಮಲಮ್ಮ ಮತ್ತು ಶಿವಬಸಪ್ಪ ಸ್ಮರಣಾರ್ಥ ಪ್ರಶಸ್ತಿ – ಬಸವರಾಜ ವೆಂಕಟಾಪುರ ಶರಣರು ರವರ ‘ಶೂನ್ಯ ಲಿಂಗ ವಿವೇಚನೆ’ ಮಹಿಳಾ ಸಾಹಿತ್ಯ ವಿಭಾಗದಲ್ಲಿ ೬. ಶ್ರೀಮತಿ ಗಿರಿಜಮ್ಮ ಚಂದ್ರಪ್ಪ ಸ್ಮರಣಾರ್ಥ ಪ್ರಶಸ್ತಿ – ಸವಿತಾ ಮಾಧವಶಾಸ್ತ್ರಿ ರವರ ‘ನೀರ್ ದೋಸೆ ’
ಪುಸ್ತಕ ಪ್ರಶಸ್ತಿ ವಿಭಾಗದಲ್ಲಿ ೭. ಡಿ.ಸತ್ಯನಾರಾಯಣ ಸ್ಮರಣಾರ್ಥ ಪ್ರಶಸ್ತಿ – ಡಾ.ಎಚ್ .ಎಲ್ ಶಿವಬಸಪ್ಪ ಹೊರೆಯಾಲ ರವರ ‘ಕರ್ಣ ಚರಿತಾಮೃತ ’
೮. ಎ.ಎಸ್.ಬಿ.ಮೆಮೋರಿಯಲ್ ಟ್ರಸ್ಟ್ (ರಿ) ಪುಸ್ತಕ ಪ್ರಶಸ್ತಿ – ಶೋಭಾ ಹರಿಪ್ರಸಾದ್ ರವರ ‘ಶೋಭಾ ರಾಮಾಯಣ ’ ಮಕ್ಕಳ ಸಾಹಿತ್ಯ ವಿಭಾಗದಲ್ಲಿ ೯. ಶ್ರೀಮತಿ ಚನ್ನಮ್ಮ ಮತ್ತು ಸಿ.ಚಿಕ್ಕಣ್ಣ (ಮೈಸೂರು) ಸ್ಮರಣಾರ್ಥ ಪ್ರಶಸ್ತಿ – ಅಚಲಾ ಬಾಪಟ್ ರವರ ‘ಮಕ್ಕಳಿಗಾಗಿ ರಾಣೀ ಅಹಲ್ಯಬಾಯಿ ಹೋಳ್ಕರ್ ’
ಆಧ್ಯಾತ್ಮಿಕ ಸಾಹಿತ್ಯ ವಿಭಾಗದಲ್ಲಿ ೧೦. ಪಿ.ಆರ್.ಸುಬ್ಬರಾವ್ ಸ್ಮರಣಾರ್ಥ ಪ್ರಶಸ್ತಿ (ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಪ್ರಾಯೋಜಿತ) – ನಾರಾಯಣ ಯಾಜಿ ರವರ ‘ಧವಳ ಧಾರಿಣಿೆ’

ವಿವರಗಳಿಗೆ : ೭೮೯೨೬ ೮೮೬೭೦

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group