ಬೀದರ – ಪ್ರಿಯಾಂಕ ಖರ್ಗೆಗೆ ಅಹಂಕಾರ ಹೆಚ್ಚಾಗಿದೆ.ಅವರ ಅಪ್ಪನ ಕೈಯಿಂದಲೂ ಆರೆಸ್ಸೆಸ್ ನಿಷೇಧ ಮಾಡಲು ಆಗಿಲ್ಲ ಇವನೇನು ಮಾಡುತ್ತಾನೆ ಎಂದು ಮಾಜಿ ಸಚಿವ ಶಾಸಕ ಪ್ರಭು ಚವ್ಹಾಣ ವಾಗ್ದಾಳಿ ನಡೆಸಿದರು.
ಪತ್ರಕರ್ತರೊಡನೆ ಮಾತನಾಡಿದ ಅವರು, ಖರ್ಗೆ ಮೀಡಿಯಾದಲ್ಲಿ ಹೆಡ್ ಲೈನ್ ಗೋಸ್ಕರ ಇಂಥ ಮಾತುಗಳನ್ನ ಹೇಳುತ್ತಾರೆ ಅವರ ಅಪ್ಪ ಮಲ್ಲಿಕಾರ್ಜುನ ಖರ್ಗೆ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಗ್ಗೆ ಈ ಪ್ರಿಯಾಂಕ ಖರ್ಗೆ ಏನು ಹೇಳುತ್ತಾರೆ ಕೇಳಿ ಎಂದರು.

ಸ್ಕ್ರೂ ಲೂಸ್ : ಇನ್ನೊಬ್ಬ ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ ಕೂಡಾ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿ, ಖರ್ಗೆಗೆ ಸ್ಕ್ರೂ ಲೂಸ್ ಆಗಿವೆ ಆದ್ದರಿಂದ ಮನಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿಯನ್ನು ಖುಷಿ ಪಡಿಸಬೇಕಲ್ಲ ಅದಕ್ಕೆ ಈ ರೀತಿ ಹೇಳಿಕೆ ಕೊಡಬೇಕಾಗುತ್ತದೆ ಎಂದರು.
ಆರೆಸ್ಸೆಸ್ ದೇಶ ಭಕ್ತ ಸಂಘಟನೆ, ಭಾರತ ಚೀನಾ ಯುದ್ಧದ ಸಮಯದಲ್ಲಿ ಸೈನಿಕರ ಬೆಂಬಲಕ್ಕೆ ನಿಂತಿತು. ಕಷ್ಟ ಕಾಲದಲ್ಲಿ ಜನರಿಗೆ ನೆರವಾಗುವ ಸಂಸ್ಥೆ ಆರೆಸ್ಸೆಸ್ ಎಂದು ಠಾಕೂರ ಹೇಳಿದರು.

