ರೈತನ ಬವಣೆ
ಹುಲುಸಾಗಿ ಬೆಳೆದು ಕಬ್ಬು
ಲೋಕಕೆ ನೀಡುವನು ಸಿಹಿ
ಕಾರ್ಖಾನೆ ಮಾಲೀಕನ ಹಿಗ್ಗು
ರೈತನ ಬದುಕು ಮಾತ್ರ ಕಹಿ ।।
ಅನ್ನ ಧಾನ್ಯವ ಬೆಳೆದು
ತುಂಬುವನು ಲೋಕದ ಹೊಟ್ಟೆ
ಬೆಳೆದ ಬೆಳೆಗೆ ಬೆಲೆ ಇಲ್ಲ
ನೋಡಲ್ಲಿ ಮಲಗಿಹನು ಖಾಲಿ ಹೊಟ್ಟೆ ।।
ಮಳೆಗಾಗಿ ಆಕಾಶದೆಡೆಗೆ ಕಣ್ಣು
ವರುಣನ ಕೃಪೆ ಅತಿಯಾಯ್ತು
ಬೆಳೆದು ನಿಂತ ಬೆಳೆ ನೋಡಲ್ಲಿ
ನೀರು ಪಾಲಾಗಿ ಹೋಯಿತು ।।
ಅತಿಯಾಸೆ ಇಲ್ವೇ ಇಲ್ಲ
ಹೊಟ್ಟೆಪಾಡಿಗಾಗಿ ದುಡಿವನು
ಕೈಗೆ ಬಂದ ತುತ್ತು ಕೈತಪ್ಪಿತ್ತು
ನೋಡಲ್ಲಿ ನೇಳಕ್ಕೆ ಶರಣಾಗುವನು ।।
ರೈತನ ಬವಣೆ ಕೇಳೋವರಿಲ್ಲ
ರೈತನ ಪರ ಮಾತನಾಡೋವರಿಲ್ಲ
ಇವ ನಮ್ಮವ ಅಲ್ವೇ ಅಲ್ಲ
ನೋಡಲ್ಲಿ ಮಣ್ಣಲ್ಲಿ ಮಣ್ಣು ಆಗುವರೆಲ್ಲ ।।
ಪ್ರಾಣ ಕಾಪಾಡುವನೇ ದೇವರು
ರೈತನಿಗಿಂತ ಇನ್ಯಾವ ದೇವರು
ಇದನ್ನು ಅರಿತು ಬದುಕಿದ್ದರೆ
ನಮಗೆ ಒಲಿವನು ಆ ದೇವರು ।।
ಡಾ. ಸುನೀಲ ಪರೀಟ
ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು
ಬೆಳಗಾವಿ