ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿ
ತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ ಹಬ್ಬವಿದು
ಬೆಳಕಿನ ದೀಪಾವಳಿ
ಹೊಸ ಬಟ್ಟೆಯ ಧರಿಸಿ
ಶುಭವ ಕೋರಿ
ಅರಿಷಡ್ವರ್ಗಗಳ ಮೆಟ್ಟಿ ನಿಂತು
ಕುಟುಂಬದವರೊಡನೆ
ನಕ್ಕು ನಲಿದು
ಸಡಗರದಿ ಸಂಭ್ರಮಿಸುವ ಹಬ್ಬ
ಬೆಳಕಿನ ದೀಪಾವಳಿ
ನಮ್ಮೊಳಗಿನ
ನರಕಾಸುರರ ಸದೆಬಡೆದು
ಸಂಪತ್ತುಗಳ ಶ್ರೀ ರಕ್ಷೆಯನು
ಲಕ್ಷ್ಮೀ ದೇವಿಯಲಿ ಬೇಡಿ
ಬಲಿ ಚಕ್ರವರ್ತಿಯ
ಪಾಡ್ಯಮಿದಿನದಲಿ
ಜಗಕೆ ಸೌಖ್ಯ ಹಾರೈಸುವ
ಬೆಳಕಿನ ಹಬ್ಬ ದೀಪಾವಳಿ
✍️ಶಿವಕುಮಾರ ಕೋಡಿಹಾಳ
ಪ್ರಾಧ್ಯಾಪಕರು ಮೂಡಲಗಿ