ಅಭಿವೃದ್ಧಿ ಕಾರ್ಯಗಳಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು – ಈರಣ್ಣ ಕಡಾಡಿ

Must Read

ಮೂಡಲಗಿ: ರಾಜಕೀಯ ವಿರೋಧಿಗಳು ಕೇವಲ ಚುನಾವಣೆ ಸಂದರ್ಭಗಳಲ್ಲಿ ಮಾತ್ರ ತಂತ್ರ ಪ್ರತಿತಂತ್ರ ಮಾಡಬೇಕು ಆದರೆ ತಮ್ಮ ಕುಂತ್ರಗಳ ಮೂಲಕ ಚುನಾವಣೆಗಳನ್ನು ಗೆದ್ದು, ಅಭಿವೃದ್ದಿ ಕಾರ್ಯಗಳಲ್ಲಿ ಅಡೆತಡೆ ಉಂಟು ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಇದರಿಂದ ನನಗೂ ಕೂಡಾ ಸಾಕಷ್ಟು ತೊಂದರೆಗಳು ಉಂಟಾದರೂ ನಿಮ್ಮೆಲ್ಲರ ಸೇವೆ ಮಾಡಲು ಅಹೋರಾತ್ರಿ ಶ್ರಮಿಸುತ್ತಿರುವುದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಶನಿವಾರ ಅ-25 ರಂದು ತಾಲೂಕಿನ ಹಳ್ಳೂರ ಮತ್ತು ದಂಡಾಪೂರ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಾಣಗೊಂಡ ಬಸ್ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳೂರ ಗ್ರಾಮದಲ್ಲಿ ಈಗಾಗಲೇ ರಾಜ್ಯಸಭಾ ಸಂಸದರ ನಿಧಿಯಿಂದ ಹಳ್ಳದರಂಗ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಚಂದ್ರವ್ವದೇವಿ ಸಮುದಾಯ ಭವನ ನಿರ್ಮಾಣಕ್ಕೆ, 5 ಲಕ್ಷ ರೂ. ಮಲ್ಲಿಕಾರ್ಜುನ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಗಾಂಧಿ ನಗರದ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ರೂ. 5 ಲಕ್ಷ ರೂ. ಹೀಗೆ ಎಲ್ಲ ಸಮುದಾಯದವರಿಗೂ ಕೂಡಾ ದೊಡ್ಡ ಪ್ರಮಾಣದಲ್ಲಿ ಅನುದಾನವನ್ನು ವಿತರಿಸುವ ಮೂಲಕ ಹಳ್ಳೂರ ಗ್ರಾಮದ ಅಭಿವೃದ್ಧಿಯಲ್ಲಿ ನಾನು ಕೂಡಾ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ ಗ್ರಾಮದ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಹಳ್ಳದರಂಗ ದೇವಸ್ಥಾನ ಹತ್ತಿರ ಸಂಸದರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಕಾಮಗಾರಿಯನ್ನು ವೀಕ್ಷಣೆ ಮಾಡಿದರು

ಈ ಸಂದರ್ಭದಲ್ಲಿ ಶಿವಪ್ಪ ಕೌಜಲಗಿ, ಶ್ರೀಕಾಂತ ಕೌಜಲಗಿ, ಸದಾಶಿವ ಮಾವರಕರ, ಸುರೇಶ ಮಗದುಮ್ಮ, ಗೂಳಪ್ಪ ನೇಸೂರ, ಅಶೋಕ ತೇರದಾಳ, ಆನಂದ ಸಂತಿ, ಬಸಪ್ಪ ಅರಳಿಮಟ್ಟಿ, ಅಂದಾನಿ ಅನಂತಪೂರ, ಲಕ್ಷ್ಮಣ ಸಪ್ತಸಾಗರ, ಶ್ರೀಶೈಲ ಹಿರೇಮಠ, ಹಣಮಂತ ಅಟಮಟ್ಟಿ, ಬಸವರಾಜ ಗಾಡವಿ, ಈರಪ್ಪ ಢವಳೇಶವರ, ಹಣಮಂತ ಗೋಡಿಗೌಡರ, ದಂಡಾಪೂರ ಗ್ರಾಮದ ಮಲಕಾರಿ ಪೋಲಿಸಗೋಳ, ಸಿದ್ದಪ್ಪಾ ಹೊರಟ್ಟಿ, ರಾಮಪ್ಪ ವಡೇರ, ಯಲ್ಲಪ್ಪ ಹೊಸೂರ, ಗೋಪಾಲ ಹೊರಟ್ಟಿ, ರಮೇಶ ಹೊರಟ್ಟಿ ಹಾಲಪ್ಪಾ ಹೊಸುರ, ಮಾರುತಿ ಹರಿಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group