ದಣಿವರಿಯದ ದಿಟ್ಟ ಮಹಿಳೆ ಶರಣೆ ಅನ್ನಪೂರ್ಣ ಅಗಡಿ

Must Read

ನಾವು – ನಮ್ಮವರು

ಅನ್ನಪೂರ್ಣ ಅಗಡಿ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಅವರು ಒಬ್ಬ ನಿಸ್ವಾರ್ಥ ಸೇವೆ ಮಾಡುವ ನಿಗರ್ವಿ ಹೆಣ್ಣುಮಗಳು ಮತ್ತು ಸರಳ ಮನಸ್ಸಿನ, ಎಲ್ಲರ ಜೊತೆಗೆ ಹೊಂದಿಕೊಳ್ಳುವ ಸ್ವಭಾವದ, ಅತ್ಯಂತ ಗೌರವಯುತವಾದ ಮಹಿಳೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮೂಲತಃ ರಾಣೇಬೆನ್ನೂರಿನವರಾದ ಅನ್ನಪೂರ್ಣ ಅಗಡಿ ಅವರು 1956 ರ ಏಪ್ರಿಲ್ 10 ರಂದು ತಾಯಿ ತವರೂರಾದ ಹಿರೇಕೆರೂರಲ್ಲಿ ಜನಿಸಿದರು. ತಂದೆ ಎಂ .ಬಿ. ಪಾಟೀಲ್ ಅವರು ರಾಣೆಬೆನ್ನೂರಲ್ಲಿ ಒಳ್ಳೆಯ ಹೆಸರು ಪಡೆದ ವರ್ತಕರು. ತಾಯಿ ಶಾಂತಾದೇವಿ ಸುಸಂಸ್ಕೃತ ಗ್ರಹಿಣಿ. ಅಜ್ಜ ಮೇಡ್ಲೇರಿಯ
ಗೌಡರಾದ ಬಸನಗೌಡ ಪಾಟೀಲರು.

ಅವರ ಅಜ್ಜನವರಿಗೆ ಗೌಡಿಕೆಗಿಂತ ಮಕ್ಕಳಿಗೆ ಪಾಠ ಹೇಳುವುದರಲ್ಲಿ ಆಸಕ್ತಿ.ಅಜ್ಜನ ಕೈಯಲ್ಲಿ ಸ್ಕೂಲಿಗೆ ಹೋಗುವ ಮೊದಲೇ ಕನ್ನಡ ಅಕ್ಷರ ಕಲಿತರು.ಬಾಲ್ಯದಲ್ಲೇ ಎಲ್ಲಾ ವಿಷಯದಲ್ಲೂ ಆಸಕ್ತಿ,ದೊಡ್ಡವರಿಗೆ ಕೈಗೂಡುತ್ತಾ ಕುಟುಂಬ ಜೀವನ ಕಲೆ ಕರಗತ ವಾಯಿತು.ತುಂಬಿದ ಕುಟುಂಬ,ವಾರಾನ್ನದ ಹುಡುಗರು,ಮನೆಯಲ್ಲಿ ನಿತ್ಯ ದಾಸೋಹ.ಅವರ ತಾಯಿ ಶರಣ ಸಂಸ್ಕೃತಿಯನ್ನು ಹೊಂದಿದ್ದರು.ಸರಳ, ಸಮಾಧಾನಿ. ತಾಯಿಯ ತಂದೆ ವೀರಭದ್ರಪ್ಪ ಅಂಗಡಿ ,ಶರಣ ಸಂಸ್ಕೃತಿ,ಶರಣ ಪರಿಪಾಲಕ ರಾಗಿದ್ದರು.ಮಕ್ಕಳ ಮದುವೆ ಶರಣ ತತ್ವ ದಂತೆ ಮಾಡಿ,ಲಿಂಗ ಪೂಜೆ ಶಿವಯೋಗದೊಂದಿಗೆ ಮನೆ ತುಂಬಿಸಿಕೊಳ್ಳ ಲಾಯಿತು.

ಅನ್ನಪೂರ್ಣ ಅವರು ನಾಲ್ಕನೆಯ ಕ್ಲಾಸ್ ಓದುತ್ತಿದ್ದಾಗಲೇ ತ್ರಿವೇಣಿ ಕಾದಂಬರಿ “ಮೊಗ್ಗಿನ ಜಡೆ ‘ ಓದಿ ಸೈಕಾಲಜಿ ಓದಬೇಕೆಂಬ ಮಹದಾಸೆ. ಅವರ 16 ನೆ ವಯಸ್ಸಿಗೆ ಧಾರವಾಡದ ಪೋಲಿಸ್ ಇನ್ಸ್ಪೆಕ್ಟರ್ ಶರಣಪ್ಪ ಅಗಡಿಯವರೊಂದಿಗೆ ಮದುವೆಯಾಯಿತು.ಏಳು ಮಕ್ಕಳಲ್ಲಿ ಅನ್ನಪೂರ್ಣ ಅಗಡಿಯವರೇ ಹಿರಿಯರು ,ಪತಿಯ ಮನೆಯಲ್ಲೂ ಹಿರಿಸೊಸೆ. ಏಳು ಮಕ್ಕಳ ದೊಡ್ಡ ಕುಟುಂಬ,ಪತಿಯೇ ಮನೆಯ ಆರ್ಥಿಕ ಜವಾಬ್ದಾರಿ ಹೊತ್ತ ಕಾರಣ ಪತಿಗೆ ಸಂಪೂರ್ಣ ಸಹಕರಿಸಿದರು.ಇವರ ಓದಬೇಕೆಂಬ ಆಸೆ ಹಾಗೆಯೇ ಉಳಿಯಿತು.ಮೂರು ಮಕ್ಕಳ ತಾಯಿಯಾಗಿ ಪತಿಯೊಡನೆ ವರ್ಗವಾದಲ್ಲಿ ಓಡಾಡುತ್ತಾ ಕೊಡಿಗೇಹಳ್ಳಿ,ಗುಬ್ಬಿ, ಶಿರಾ, ತುಮಕೂರು, ಬೆಂಗಳೂರು ಓಡಾಡುತ್ತಾ ಕಳೆದರು.

ಅನ್ನಪೂರ್ಣ ಅವರಿಗೆ ಚಿಕ್ಕಂದಿನಲ್ಲೇ ಓದು,ಬರಹ,ಕಲೆ,ಅಡಿಗೆ, ತೋಟಗಾರಿಕೆ,ಎಲ್ಲ ವಿಷಯದಲ್ಲೂ ಆಸಕ್ತಿ,ತಂದೆಯಿಂದ ಶಿಸ್ತು,ತಾಯಿಯಿಂದ ಸೇವೆ, ದಾಸೋಹ ಜೀವನದ ಅಳವಡಿಕೆ,ಹನ್ನೆರಡು ವರ್ಷದವಳಿದ್ದಾಗ,ತಾಯಿಗೆ ಎರಡು ವರ್ಷ ಹುಷಾ ರಿಲ್ಲದಾಗ,ಅಜ್ಜನೊಡನೆ ತಮ್ಮ ತಂಗಿ ಮನೆಯ ಜವಾಬ್ದಾರಿ ಹೊತ್ತು ಪುಟ್ಟ ತಾಯಿಯಾಗಿ ದ್ದರು.
ತಂದೆಯ ಆಸೆಯಂತೆ ಸ್ವಲ್ಪ ಸಂಗಿತ ಕಲಿತರು,
ಕಲೆ ಹುಟ್ಟಿನಿಂದಲೇ ಬಂದಿತ್ತು ಪ್ರತಿಯೊಂದು ಕಲಾತ್ಮಕವಾಗಿ ಸಿಂಗರಿಸುವ ಅಭ್ಯಾಸವಿತ್ತು.

ಅನ್ನಪೂರ್ಣ ಅವರ ಪತಿ ಕೂಡ ನಿಷ್ಟಾವಂತರು.ಮಿತಬಾಷಿ,ದಕ್ಷತೆಗೆ ಒಳ್ಳೆ ಹೆಸರು.ಬೆಳ್ಳಿ ಪದಕ ಪಡೆದವರು.ಸುಂದರ ಸಂಸಾರ. ಮದುವೆಯಾಗಿ 13 ವರ್ಷ (ಅನ್ನಪೂರ್ಣ ಅಗಡಿ ಅವರಿಗೆ 31 )ಇರುವಾಗ ಅಕಸ್ಮಾತ್ತಾಗಿ ನಿಧನರಾದರು.ಆಕಾಶ ತಲೆ ಮೇಲೆ ಬಿದ್ದಂಥ ಪರಿಸ್ಥಿತಿ.ನೂರು ರೂ ಸರಿಯಾಗಿ ಎಣಿಸಲು ಬಾರದ ಅನ್ನಪೂರ್ಣ ಅಗಡಿ,ಮಕ್ಕಳಿಗೆ ತಂದೆಯೂ ಆದರು.ಅವರ ಕಣ್ಮುಂದೆ ಇದ್ದದ್ದು ಮಕ್ಕಳಿಗೆ ಒಳ್ಳೆ ವಿದ್ಯಾಬ್ಯಾಸ ಕೊಡಿಸಿ ಸಮಾಜದಲ್ಲಿ ಸುಸಂಸ್ಕೃತ ಮನುಜರನ್ನಾಗಿ ಮಾಡಿ,ಕಲ್ಯಾಣವಂತರನ್ನಾಗಿಸಿ ನೆಲೆ ನಿಲ್ಲಿಸುವುದಾಗಿತ್ತು . ಅವರಿಗೆ ಇದ್ದದ್ದು ದಾರವಾಡದಲ್ಲಿ ಒಂದು ಮನೆ ಹಾಗೂ ಪೆನ್ಷನ್ ಮಾತ್ರ. ಯೋಗ ಮತ್ತು ಪೇಂಟಿಂಗ್ ಹೇಳಿಕೋಡುತ್ತಾ,ಮಕ್ಕಳಿಗೆ ವಿದ್ಯಾಬ್ಯಾಸ,ಒಳ್ಳೆ ಊಟ,ಹಾಗೂ ಉತ್ತಮ ಮಾರ್ಗದಲ್ಲಿ ಬೆಳೆಸುತ್ತಾ, ಬಡವರಿಗೆ ಉಚಿತವಾಗಿ ಹಾಗೂ,ಮಕ್ಕಳಿಗೆ ರಜೆಯಲ್ಲಿ ಉಚಿತ ಶಿಬಿರಗಳನ್ನು ಮಾಡುತ್ತಾ, ಮೈಸೂರು ಮಾನಸ ಗಂಗೋತ್ರಿಯಲ್ಲಿ ಎಕ್ಸ ಟರ್ನಲ್ ಬಿ ಎ .,ಹಾಗೂ ಎಲ್ಲಾಪೂರದ ಡಾ.ಮುದ್ಗುಣಿಯವರ ಪ್ರಕೃತಿ ಚಿಕಿತ್ಸಾ ಕೇಂದ್ರದ, DNHS (ಡಾಕ್ಟರ್ ಆಫ್ ನ್ಯಾಚುರೋಪತಿ & ಹೆಲ್ತ್ ಸಿಸ್ಟಮ್) ,ಹಾಗೂ ಧಾರವಾಡ ಯುನಿವರ್ಸಿಟಿಯಲ್ಲಿ ಯೋಗ ಸರ್ಟಿಫಿಕೇಟ್ ಕೋರ್ಸ್ ಕೂಡ ಮಾಡಿಕೊಂಡರು.
ಮಾನಸಿಕ ಸ್ವಾಸ್ಥ ಶಿಬಿರಗಳನ್ನು ಬ್ರಹ್ಮಕುಮಾರಿಯವರಿಂದ ಏರ್ಪಡಿಸುವುದು, ತಾವು ವಾಸಿ ಸಿದ್ದ ನಾರಾಯಣಪುರದ ಸ್ವಚ್ಛತೆ ಹಾಗೂ ಜನರ ಬಗ್ಗೆ ಕಾಳಜಿ ವಹಿಸುವುದು. ಅಸಹಾಯಕರಿಗೆ ಕೈಲಾದ ಸಹಾಯ ಮಾಡುವುದು.
ಹಾಡು, ಸಂಗೀತ ಮುಂತಾದ ಸ್ಪರ್ಧೆಗಳಿಗೆ ಜಡ್ಜ್ ಆಗಿಅವರನ್ನು ಕರೆಯ ತೊಡಗಿದರು. ಕಲೆಗೆ ಜೀವ ತುಂಬುವ ಶಿಕ್ಷಕಿಯಂದು ಪ್ರಸಿದ್ಧಿ ಪಡೆದರು. ಧಾರವಾಡದಲ್ಲಿ ಪ್ರಥಮ ಚಾರ್ಕೋಲ್ ಕಲಿಸಿದ ಹವ್ಯಾಸಿ ಕಲಾವಿದೆ.ಮೂರು ಆರ್ಟ್ ಎಕ್ಸಿಬಿಷನ್ಗಳನ್ನು,ಮಾಡಿದ್ದಾರೆ.
ಹಾಗೆಯೇ ಎಲ್ಲ ಥರದ ಯೋಗ,ಧ್ಯಾನ ಅಭ್ಯಾಸ ಮಾಡಿದರು.ಬಸವಾಭಿಮಾನಿ,ಸ್ವಾಭಿಮಾನಿ.ಸ್ವತಂತ್ರ ವಿಚಾರವಾದಿಯಾದರು.

ಅನ್ನಪೂರ್ಣ ಅವರ ಮಕ್ಕಳು ಸರಳ ಶಿಸ್ತಿನ ಜೀವನದಿಂದ ಮೆ ರಿಟ್ ನಲ್ಲೇ ಓದುತ್ತಾ,ದೊಡ್ಡ ಮಗ ಪ್ರವಿಣ ಕೌಸಾಳಿ ಇನ್ಸ್ಟಿಟ್ಯೂಟ್ ,ನಲ್ಲಿ ಎಂ.ಬಿ. ಎ ಮಾಡಿದರು.
ಇನ್ನಿಬ್ಬರು ಕಿರಣ್ ಅರುಣ್ ಬೆಂಗಳೂರಲ್ಲಿ B.E ಮಾಡಿಕೊಂಡರು. ದೊಡ್ಡ ಮಗನದು ಬಿಸಿನೆಸ್ ಮಾಡಲೇ ಬೇಕೆಂಬ ಬಲವಾದ ಆಸೆಗೆ ಮನೆ ಮೇಲೆ ಸಾಲ ತೆಗೆದುಕೊಟ್ಟು ಸ್ಯಾಮ್ಸಂಗ್ ಹೋಮ್ ಅಪ್ಲೈನ್ಸಸ್ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡು ಬಿಜಿನೆಸ್ ಸ್ಟಾರ್ಟ್ ಮಾಡಿ ಹುಬ್ಬಳ್ಳಿಗೆ ಬಂದು ನೆಲೆಸಿ ನಂತರ ಬೆಳಗಾವಿ,ಗೋವಾ, ಮುಂತಾದ ಕಡೆ ನಾಗಶಾಂತಿ ಅನುಶರಣ ಆಟೋಮೊಬೈಲ್ ಕಂಪನಿ, ಮೂರು ಜನರ ಕಠಿಣ ಪರಿಶ್ರಮದಿಂದ ವಿಸ್ತರಿಸಲಾಯಿತು.

ಅನ್ನಪೂರ್ಣ ಅವರು ಧಾರವಾಡದಲ್ಲಿದ್ದಾಗ, ಪೊಲೀಸ್ ಪತ್ನಿಯರ ಕಲ್ಯಾಣ ಸಂಘವನ್ನು ಸ್ಥಾಪಿಸಿ, ತುಂಬಾ ಕಷ್ಟ ಪರಿಸ್ಥಿತಿಯಲ್ಲಿ ಇದ್ದ ರಿಜರ್ವ ಪೊಲೀಸ್ ಪತ್ನಿಯರಿಗೆ, ಎರೆಹುಳು ಗೊಬ್ಬರ, ಕೆಲವು ಗೃಹ ಉದ್ಯೋಗ ತರಬೇತಿ ಕೊಡಿಸಿ ಮಕ್ಕಳಿಗೆ ರಜಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿತ್ತು. ಹಾಗೂ ನಾರಾಯಣಪುರದ ಮಹಿಳೆಯರಿಗೆ ಮಾನಸಿಕ ಸ್ವಾಸ್ಥ್ಯ ಶಿಬಿರಗಳನ್ನು ಏರ್ಪಡಿಸುತ್ತಿದ್ದರು. ಆಕಾಶವಾಣಿ ವಿಡಿಯೋದಲ್ಲಿ ಮಹಿಳಾ ಕಾರ್ಯಕ್ರಮದಲ್ಲಿ ಉಪನ್ಯಾಸ ಚಿಂತನೆಗಳಲ್ಲಿ ಭಾಗವಹಿಸುತ್ತಿದ್ದರು. *ಸಕ್ಸಸ್* *ಫುಲ್ ಸಿಂಗಲ್ ಪೇರೆಂಟ್* ಎಂದು ಅಭಿನಂದಿಸಿ ಚರ್ಚೆಯಲ್ಲಿ ಭಾಗವಹಿಸಲು ಆಕಾಶವಾಣಿ ಕಾರ್ಯಕ್ರಮ ಏರ್ಪಡಿಸಿತ್ತು. ಅವರ ಸಾಮಾಜಿಕ ಕಳಕಳಿ ಕಂಡು ಕಾರ್ಪೊರೇಷನ್ ಎಲೆಕ್ಷನ್ ಗೆ ನಿಲ್ಲಲು ಕರೆ ಕೊಟ್ಟರೂ ರಾಜಕೀಯದಲ್ಲಿ ಆಸಕ್ತಿ ಇಲ್ಲದ ಕಾರಣ ನಿರಾಕರಿಸಿದರು.
ಮನೆ ಮುಂದೆ ಬಸ್ಸಿಗೆ ಕಾಯುತ್ತಾ ಬಿಸಿಲಲ್ಲಿ ನಿಲ್ಲುವ ಜನರನ್ನ ನೋಡಿ ಬಸ್ ಸ್ಟಾಪ್ ಕಟ್ಟಲು ನಾರಾಯಣಪುರ ಸಂಘಕ್ಕೆ ಅಲ್ಪ ದುಡ್ಡಿನ ಸಹಾಯ ಮಾಡಿದರು. ನಾರಾಯಣಪುರದ ಅವರ ಮನೆ ಬರೀ ಪೇಂಟಿಂಗ್ ಯೋಗ ಕ್ಲಾಸ್ ಆಗದೆ ಮಹಿಳೆಯರಿಗೆ ಸಾಂತ್ವನ ಹಾಗೂ ಸಹಾಯ, ಸಹಕಾರ ನೀಡುವ ಸ್ಥಳವಾಗಿತ್ತು.
ಮೂರು ವರ್ಷ ರಾಜಕೀಯ ಪಕ್ಷವೊಂದರ ಮಹಿಳಾ ವಿಂಗ್‌ನಲ್ಲಿ ಹುಬ್ಬಳ್ಳಿ ಧಾರವಾಡ ಸೆಕ್ರೆಟರಿಯಾಗಿ ಉತ್ತಮ ಸೇವೆ ಸಲ್ಲಿಸಿದರು. ನಂತರ ಹುಬ್ಬಳ್ಳಿಯ ಕ್ರಿಯಾಶಕ್ತಿ ಸಂಘದ ಉಪಾಧ್ಯಕ್ಷೆಯಾಗಿ, ಜೈಂಟ್ಸ್ ಗ್ರೂಪ್ ಸಹೇಲಿಯಾ ಅಧ್ಯಕ್ಷರಾಗಿ, ಮಹಿಳಾ ವಿದ್ಯಾಪೀಠದ ಮ್ಯಾನೇಜಿಂಗ್ ಕಮಿಟಿ ಮೆಂಬರ್ ಆಗಿ,ಸೇವೆ ಸಲ್ಲಿಸಿ, ಹಾಗೆ ಮೂರು ಮಕ್ಕಳ ಮದುವೆ ಮಾಡಿ ಮೊಮ್ಮಕ್ಕಳ ಪಾಲನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಮಕ್ಕಳಿಗೆ ಬಿಜಿನೆಸ್ ನಲ್ಲಿ ಸಾಕಷ್ಟು ಮನೋಬಲ ತುಂಬುತ್ತಾ ಅವರ ಯೋಗಕ್ಷೇಮ ಅಭಿವೃದ್ಧಿಗೆ ಹೆಗಲು ಕೊಟ್ಟರು. ಇದರ ಬಿಡುವಿನಲ್ಲಿ ನಡುನಡುವೆ ಬರವಣಿಗೆ ಮುಂದುವರೆದಿತ್ತು. ಅಳುವ ಹುಡುಗ ಬೀಳುವ ಹುಡುಗಿ ಎಂಬ ಮಕ್ಕಳ ಪುಸ್ತಕ ಪ್ರಥಮವಾಗಿ ಪ್ರಕಟವಾಯಿತು.
ನಂತರ 2010 ನಲ್ಲಿ, ಕಥಾ ಸಂಕಲನ ಪ್ರಕಟವಾಗಿ ಅವನಿ ಸಂಸ್ಥೆಯಿಂದ ಜಿಲ್ಲಾಮಟ್ಟದ ಎರಡನೇ ಬಹುಮಾನ ಪಡೆಯಿತು. *ಆನಂದಗಂಧ* *ಚೆಲ್ಲಿ* , *ಮತ್ತೆ ಅರಳಿತು* ಹಲವು ಕೈಪಿಡಿಗಳು.ಪುಸ್ತಕಗಳು ಪ್ರಕಟವಾದವು.

ಬಸವ ತತ್ವ ಪ್ರಚಾರಕ್ಕಾಗಿ ಮನೆಗೆ ಬಂದವರಿಗೆ ಶರಣರ ವಚನಗಳ ಹಾಗೂ ಸಂಕ್ಷಿಪ್ತ ಪರಿಚಯದ ಕೈಪಿಡಿಗಳನ್ನು ಕೊಡುತ್ತಾ ಬಂದಿದ್ದಾರೆ. ಚಿತ್ರದುರ್ಗ ಮಠದಿಂದ ಬಸವ ತತ್ವ ಪ್ರಚಾರ ಹಾಗೂ ಸಮಾಜ ಸೇವೆಗೆ ಗೌರವಿಸಿ ಸನ್ಮಾನಿಸಿದ್ದಾರೆ. ಹುಬ್ಬಳ್ಳಿಯ ಅಕ್ಕನ ಬಳಗದವರು ಕ್ರಿಯಾಶೀಲ ಮಹಿಳೆ ಎಂದು ಸನ್ಮಾನಿಸಿದ್ದಾರೆ.

ಬೆಳಗಾವಿ ,ಉತ್ತರ ಕರ್ನಾಟಕ,ಲೇಖಕಿ ಸಂಘ.ಹೂಬಳ್ಳಿ ಲೇ ಸಂಘ ಹಾಗೂ ಬಸವ ಕೇಂದ್ರ, ಬಸವ ಸಂಘಟನೆ ಲಿಂಗಾಯತ ಸಂಘಟನೆಗಳಲ್ಲಿ , ಹುಬ್ಬಳ್ಳಿ ಬಸವ ಕೇಂದ್ರದ ಹಾಗೂ ಜಾಗತಿಕ ಲಿಂಗಾಯತ ಮ್ಯಾನೇಜಿಂಗ್ ಕಮಿಟಿಯಲ್ಲಿ, ಸೇವೆ ಸಲ್ಲಿಸಿದ್ದು,ಈಗ ಸದ್ಯ ಮೆಂಬರ್ ಆಗಿದ್ದಾರೆ. ಮನೆಯಲ್ಲಿ ಆಗಾಗ ಬಸವ ಗೋಷ್ಠಿಗಳನ್ನು ನಡೆಸುತ್ತಾರೆ ವರ್ಷಕ್ಕೊಮ್ಮೆ ದೊಡ್ಡ ಪ್ರಮಾಣದಲ್ಲಿ ಬಸವ ಗೋಷ್ಠಿ ಇಲ್ಲವೆ ವಚನ ಶ್ರಾವಣ ನಡೆಸುತ್ತಾರೆ. ಬಸವಣ್ಣ ಹಾಗೂ ಶರಣರ ವಚನದ ಬಗ್ಗೆ ಅಭಿಮಾನ ಹೊಂದಿದ್ದು, ಅವಹೇಳನವನ್ನು ನಿಷ್ಠುರವಾಗಿ ಖಂಡಿಸುತ್ತಾರೆ. ವಾಸ್ತವ ಸತ್ಯ ತಿಳಿಸಲು ಪ್ರಯತ್ನಿಸುತ್ತಾರೆ.

ಅವರು ಅವ್ಹಾನಿತರಾಗಿ ನಾನಾ ಕಾರ್ಯಕ್ರಮಗಳಲ್ಲಿ , ಉಪನ್ಯಾಸ ಕೊಟ್ಟಿದ್ದಾರೆ.ಉದಯ ,ಹಾಗೂ ಬಸವ ಟಿವಿಯಲ್ಲಿ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ರುಚಿಕರ ಅಡುಗೆ ಮಾಡಿ ಬಡಿಸುವದು,ಮಕ್ಕಳ ಪಾಲನೆ ಅವರಿಗೆ ಬಹಳ ಬಹಳ ಇಷ್ಟ. ಪ್ರಕೃತಿ ಪ್ರೇಮಿ, ಪರಿಸರವಾದಿ. ತಾವು ವಾಸಿಸುವ ಶ್ರೇಯಾ ಕಾಲೋನಿಯಲ್ಲಿ ಎರಡು ನೂರು ಗಿಡ ಹಚ್ಚಿ ಬೆಳೆಸಿದ್ದಾರೆ. ಕಾಲೋನಿ ಮಹಿಳೆಯರನ್ನು ಒಟ್ಟುಗೂಡಿಸಿ ಜೀವನ ಕಲಾ ಮಹಿಳಾ ಸಂಘ ಸ್ಥಾಪಿಸಿ,ಮಿಲೆಟ್ ಮಾಂಕ್ ವರ್ಕ್ ಶಾಪ್,ಅಡಿಗೆ,ರಂಗೋಲಿ ಸ್ಪರ್ದೆ, ಧ್ಯಾನ ಶಿವಯೋಗ, ಸ್ವಚ್ಚತಾ ಕಾರ್ಯಕ್ರಮ, ಪೋಲಿಸರಿಂದ ಮಹಿಳೆಯರಿಗೆ ಜಾಗೃತಿ, ಮಕ್ಕಳಿಗೆ ನಾನಾ ತರದ ಚಟುವಟಿಕೆ ಏರ್ಪಡಿಸಿ ,ಸದಾ ಮಕ್ಕಳ ಒಡನಾಡಿ ಆಗಿದ್ದಾರೆ.ವರಕನ್ಯಾ ಹುಡುಕಿ ಕೊಡುವ ಉಚಿತ ಸೇವೆ.ತಮ್ಮ ಮನೆಕೆಲಸದವರ ಮಕ್ಕಳು ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವದು ಹೀಗೆ ಹತ್ತು ಹಲವಾರು ಕಾರ್ಯಕ್ರಮ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

2016 ರಲ್ಲಿ ಆಸ್ಟ್ರೇಲಿಯಾದ ಶರಣ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಸಾಕಷ್ಟು ಕವನಗಳು, ಚುಟುಕು ಗಳು,ಬಹುಮಾನ ಪಡೆದಿವೆ.ಅವರು ಸಿಂಗಪೂರ, ಮಾರಿಷಸ್,ಜಪಾನ್ ನ್ಯೂಜಿಲೆಂಡ್, ಭೂತಾನ್,ದುಬೈ, ವಿಯೆಟ್ನಾಂ, ಅಜರ್ ಬೈಜಾನ ಕುಟುಂಬ ದೊಡನೆ.ವಿದೇಶ ಪ್ರವಾಸ ಮಾಡಿದ್ದಾರೆ.

ಅಕ್ಕನ ಅರಿವಿನ ಸದಸ್ಯೆಯಾಗಿ, ಉಪನ್ಯಾಸ,ಪ್ರಬಂದ ,ವಚನ ನಿರ್ವಚನ.ಶರಣರ ಜೀವನ ಚರಿತ್ರೆ,ಬರೆಯುತ್ತಾ ,ವಚನ ಅಧ್ಯಯನದ ಸಂ‌ಸ್ಥೆಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.ತಾಯಿ ಎಂಬ ಕಾಮಧೇನು,ಮೂರು ದಿನದ ಮಲ್ಲಿಗೆ ದೇವಾಂಗನಾ ಶಾಸ್ತ್ರಿ,ಸಾರಿಲ್ಲದ ಊಟ ಬಲುಬೋರು,(ಪ್ರಬಂದಗಳನ್ನು ಮಂಡಿಸಿದ್ದಾರೆ.)

ಅನ್ನಪೂರ್ಣ ಅವರು ಅಖಿಲ ಭಾರತ ಕವಯಿತ್ರಿ ಸಂಘದ ಸದಸ್ಯೆಯಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಮೂಡನಂಬಿಕೆ,ಒಣ ಕಂದಾಚಾರ ವಿರೋಧಿ.ಪ್ಲಾಸ್ಟಿಕ್ ಬಳಕೆ ಹಾನಿಕಾರಕ, ತೆಂಗಿನಕಾಯಿ ನೀರು ವ್ಯರ್ಥ ಮಾಡದೆ ಬಳಸುವ ಬಗ್ಗೆ ,ಜನ ಜಾಗೃತಿ ಮೂಡಿಸಲು ಪ್ರಯತ್ನಿದ್ದಾರೆ.

ಅನ್ನಪೂರ್ಣ ಅವರಿಗೆ ಅಡುಗೆ,ಭೋದನೆ,ಬರಹ,ಓದು, ಹಾಡುವುದು, ತೋಟಗಾರಿಕೆ, ಉಪನ್ಯಾಸ, ಮನಃಶಾಸ್ತ್ರ, ಅಧ್ಯಾತ್ಮ, ಶರಣ ವಚನ ಚಿಂತನೆ, ಸಮಾಜಶಾಸ್ತ್ರ, ಇತಿಹಾಸ , ಕಲೆ,ಪ್ರಕೃತಿ,ಮಕ್ಕಳ ಒಡನಾಟ. ಪ್ರಯೋಗ, ಸಂಶೋದನೆ, ಮುಂತಾದ ಜಗತ್ತಿನ ಒಳ್ಳೆಯ ವಿಷಯಗಳಲ್ಲಿ ಆಸಕ್ತಿ.
ಹುಟ್ಟಿದ ಮೇಲೆ ಭೂಮಿಗೆ ಏನಾದರೂ ಕೊಟ್ಟು ಹೋಗಬೇಕೆನ್ನುವ ಆಸೆ ಇದೆ.
ಧಾರವಾಡದ ನಾರಾಯಣಪೂರ ಸಂಘದ ಮ್ಯಾನೇಜಿಂಗ ಕಮಿಟಿ ಮೆಂಬರ್ ಆಗಿ ಕೆಲಸ ಮಾಡಿದ್ದಾರೆ.
ಹುಬ್ಬಳ್ಳಿ.ಅ.ಕ.ಮ.ಲೇ ಸಂಘದ ಸಲಹಾ ಸದಸ್ಯರಾಗಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಅವರ ಬೆಂಬಲ ಸದಾ ಇದೆ.
ಮೀಸಲಾತಿಗೆ ಇಲ್ಲ.ಬಸವಣ್ಣ ಪ್ರತಿಯೊಬ್ಬರೂ ದುಡಿದು, ತಿನ್ನಬೇಕು ಅಂದಾಗ ಮೀಸಲಾತಿ ಏಕೆ ? ದುಡಿಯಲು ತೀರಾ ಅಸಾಯಕರಾದವರಿಗೆ ಮಾತ್ರ ಮೀಸಲಾತಿ ಇರಲಿ ಎನ್ನುವುದು ಅವರ ಅಭಿಪ್ರಾಯ.

ಅವರು ಮುರಗೋಡದಲ್ಲಿ ಒಂದೇ ದಿನದಲ್ಲಿ,110 ಮಹಿಳೆಯರಿಗೆ ಸರಳವಾಗಿ ಬೇಸಿಕ್ ಕರ್ನಾಟಕ ಕಸೂತಿ ಉಚಿತವಾಗಿ ಕಲಿಸಿ ಗಳಿಕೆಗೆ ಅನುವು ಮಾಡಿಕೊಟ್ಟಿದ್ದಾರೆ.

ಒಟ್ಟಿನಲ್ಲಿ ಅನ್ನಪೂರ್ಣ ಅವರು ಒಬ್ಬ ಪ್ರಬುದ್ಧ ಮಾನವೀಯತೆಯ ಕಾಳಜಿ ಇರುವ ಹೆಣ್ಣುಮಗಳು ಮತ್ತು ಬಸವತತ್ವದಲ್ಲಿ ಅಪಾರ ಆಸಕ್ತಿ ಉಳ್ಳವರು.ತಮ್ಮ ಕುಟುಂಬದ ಜೊತೆ ಜೊತೆಗೆ ಸಾಮಾಜಿಕ ಕಳಕಳಿ ಕೂಡಾ ಇರುವ ಒಬ್ಬ ಅಪರೂಪದ ಮಹಿಳೆ.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group