ಕವನ : ಸಾಲು ಮರದ ನೆರಳು

Must Read

ಸಾಲು ಮರದ ನೆರಳು

ಅವಳು ಬದುಕಿದಳು
ಹೀಗೆ ಒಬ್ಬಳೇ
ನೆಟ್ಟ ಕೋಟಿ
ಮರಗಳ ಜೊತೆಗೆ
ಹೂವು ಹಣ್ಣು ಹಂಪಲು
ಮರಗಳಿಗೆ ನೀರುಣಿಸಿ
ತಂಗಿದಳು ತನ್ನೆಳಲು
ಮಧುರ ತಂಪಿನಲಿ
ದಾರಿ ಪಯಣಿಗರಿಗೆ
ಮೃದು ಮಾತು ಹೇಳಿ
ದಣಿವ ತಣಿಸಿದ ತಾಯಿ
ನೆಲ ಭೂಮಿ
ಸಸ್ಯ ಮರಿಗಳಿಗೆ
ನಿತ್ಯ ಉದಕವನೆರೆದು
ಮುಗಿಲು ಮುಟ್ಟಿದವು
ಗಿಡ ಮರ ಬಳ್ಳಿ
ದೇವಿ ತಿಮ್ಮಕ್ಕ
ಅಲ್ಲ ಇವಳು ಹೆಣ್ಣು
ಜೀವಜಾಲದ ಕಣ್ಣು
ಭೂದೇವಿಯ ಮಡಿಲಿನ
ಹಿರಿಯ ಮಗಳು
ನೂರು ದಾಟಿದ ವಯಸ್ಸು
ಜೀವ ಜಂಗಮ ಮನಸ್ಸು
ಬಿಟ್ಟು ಹೋದಳು ತಿಮ್ಮಕ್ಕ
ನೂರು ದಶಕದ ಮರ
ನೂರು ಶತಕದ ತಂಪು
ನಿತ್ಯ ನೆನಹು ನೆನಪು
ಸಾಲು ಮರದ ನೆರಳು

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

(ಸಾಲು ಮರದ ತಿಮ್ಮಕ್ಕ ಬಯಲಾದ ಸಂದರ್ಭದಲ್ಲಿ)

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group