spot_img
spot_img

ನಾವು ಬಯಸಿದ್ದೆಲ್ಲವೂ ಭಗವಂತ ಕೊಡುತ್ತಾನೆ

Must Read

spot_img
- Advertisement -

ಕೆಲವರಿಗೆ ನಿಧಾನ ವಾದರೆ ಕೆಲವರಿಗೆ ಶೀಘ್ರವಾಗಿ ದೊರೆಯುತ್ತದೆ. ಭೌತಿಕ ಆಸೆಗಳು ಶೀಘ್ರವಾಗಿ ಆದರೆ ಭೌತಿಕಾಸಕ್ತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ವಿಚಾರಗಳು ಶೀಘ್ರವಾಗಿ ತಿಳಿದರೆ ಜ್ಞಾನೋದಯ ಎನ್ನಲಾಗದು.

ಇಲ್ಲಿ, ನಿಧಾನವೆ ಪ್ರಧಾನ ಎನ್ನುವ ಸತ್ಯ ಎರಡೂ ಕಡೆ ಅಗತ್ಯ. ಆದರೆ,ಆಧುನಿಕ ಜಗತ್ತಿನ ವೇಗದಲ್ಲಿ ಮಾನವ ನಡೆಯುವಾಗ ಈ ನಿಧಾನದ ನಡಿಗೆಯಿಂದ ಜೀವನ ತನ್ನ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಶೀಘ್ರವಾಗಿ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಮಧ್ಯವರ್ತಿಗಳ ಸಹಕಾರ ಅಗತ್ಯವಾಗಿ ಯಾವುದೇ ಬಯಕೆಗಳು ಪೂರ್ಣತೆ ಕಾಣದೆ ಅರ್ಧಕ್ಕೆ, ಅರ್ಧಸತ್ಯಕ್ಕೆ, ಅತಂತ್ರಸ್ಥಿತಿಗೆ ನಿಂತು ಮುಂದೆ ಹೋಗಲಾಗದೆ, ಹಿಂದೆ ಬರಲಾಗದ ಪರಿಸ್ಥಿತಿಯಲ್ಲಿ ಜೀವನ ನಿಂತಿರುತ್ತದೆ.

ಇದಕ್ಕಾಗಿ ಕೊರಗಿ ಕೂರುವ ಬದಲು ,ನಮ್ಮ ಬಯಕೆಗಳು ಎಷ್ಟು ಸತ್ವ,ಸತ್ಯ ಧರ್ಮದಲ್ಲಿದೆ ಎನ್ನುವ ಜ್ಞಾನದ ಕಡೆಗೆ ಮನಸ್ಸನ್ನು ನಡೆಸಿದರೆ, ನಿಂತ ಸ್ಥಳ ಸರಿಯೋ ತಪ್ಪೋ ಅರ್ಥವಾದರೆ ಸರಿ ಇದ್ದರೆ ಕಷ್ಟಪಟ್ಟು ನೇರವಾಗಿ ಮುಂದೆ ನಡೆಯಬಹುದು. ತಪ್ಪಿದ್ದರೆ ಮುಲಾಜಿಲ್ಲದೆ ಹಿಂದೆ ಬಂದು ಉತ್ತಮ ದಾರಿಗೆ ಸೇರಬಹುದು. ಎಲ್ಲರೂ ಅವರವರ ದಾರಿ ಸರಿ ಎಂದೇ ನಡೆಯುತ್ತಾರೆ. ಆದರೆ ದಾರಿಯೇ ಮುಚ್ಚಿ ಹೋದಾಗಲೆ ಸಮಸ್ಯೆ ಹೆಚ್ಚಾಗುವುದಲ್ಲವೆ? ಸಮಸ್ಯೆ ಎದುರಾದಾಗ ಮಧ್ಯವರ್ತಿಗಳು ಕಣ್ಮರೆಯಾಗಿರುತ್ತಾರೆ.

- Advertisement -

ಹೀಗಾಗಿ ನಾವೇ ಸಮಸ್ಯೆಗೆ ಕಾರಣ ತಿಳಿದು ಮರೆಯಲ್ಲಿದ್ದೇ ಪರಿಹಾರ ಕಂಡುಕೊಳ್ಳಲು ಭಗವಂತನಿಗೆ ಶರಣಾಗಬೇಕು. ಭಗವಂತ ಯಾವ ರೂಪದಲ್ಲಾದರೂ ಬಂದು ಪರಿಹಾರ ಸೂಚಿಸಬಹುದು. ಇದರಲ್ಲಿ ಹಣ ಕಳೆದುಕೊಂಡರೆ ದಾನ ಮಾಡಿದೆನೆಂದುಕೊಳ್ಳಬಹುದು.

ಹಣವನ್ನು ದಾನ ಮಾಡಿದರೆ ಸಾಲ ಕಳೆಯುತ್ತದೆ. ಸಾಲಕಳೆದಂತೆ ಜ್ಞಾನ ಬರುತ್ತದೆ. ಇದಕ್ಕೆ ವಿರುದ್ದ ನಡೆದರೆ ಅಜ್ಞಾನದಿಂದ ಇನ್ನಷ್ಟು ಸಾಲ ಮಾಡಿ ಸಮಸ್ಯೆ ಹೆಚ್ಚುತ್ತದೆ.

ಆಧ್ಯಾತ್ಮದ ಸತ್ಯಕ್ಕೂ ಬೌತಿಕದ ಸತ್ಯಕ್ಕೂ ಇದೇ ವ್ಯತ್ಯಾಸ. ನಾವು ಆಧ್ಯಾತ್ಮದ ಪ್ರಕಾರ ನಡೆದಂತೆಲ್ಲಾ ಹಣವನ್ನು ಸದ್ಬಳಕೆ ಮಾಡಿಕೊಂಡು ಸಂತೋಷಪಟ್ಟರೆ ಭೌತಿಕದೆಡೆಗೆ ನಡೆದಂತೆ ಹಣ ಸಂಪಾಧನೆಯೇ ಜೀವನದ ಗುರಿಯಾಗಿರುತ್ತದೆ. ವ್ಯವಹಾರ ಜ್ಞಾನವೂ ಅಗತ್ಯವಿದ್ದರೂ ಜೀವನವಿಡೀ ಇದೇ ನಡೆಸಿದರೆ ಋಣ ತೀರಿಸಲು ಮರಳಿಬರಲೇಬೇಕಷ್ಟೆ.

- Advertisement -

ಮರಳಿ ಭಗವಂತನಡೆಗೆ ಹೋಗೋದೆ ಬಯಕೆಯಾದರೆ ಭಗವಂತನ ಬೇಡೋದೆ ಬೇಡ. ಇದ್ದದ್ದರಲ್ಲಿಯೇ ತೃಪ್ತಿ ಕಾಣುತ್ತಾ, ಸಾಧ್ಯವಾದರೆ ಸಮಾಜಕ್ಕೆ ಕೊಟ್ಟು ಜೀವನ ನಡೆಸಿದರೆ, ನಮ್ಮ ಹತ್ತಿರವೆ ಇದ್ದು ನಡೆಸೋದು ಮಹಾಶಕ್ತಿಯೆ ಎನ್ನುವ ಅನುಭವ ವಾಗುತ್ತದೆ. ನಾನು ಬೇರೆಯಲ್ಲ ಪರಮಾತ್ಮಬೇರೆಯಲ್ಲ, ನಾನೆಂಬುದಿಲ್ಲ ಇವೆಲ್ಲದರ ಅರಿವಾಗಲು ಸಾಧ್ಯವೆನ್ನುವುದೆ ಅದ್ವೈತ. ಎಲ್ಲಿಯವರೆಗೆ ಬೇಡುವೆವೋ ಅಲ್ಲಿಯವರೆಗೆ ನೀಡುತ್ತಾಇರುತ್ತಾನೆ. ಬೇಡೋನು ದೀನ ಸ್ಮರಿಸೋನೆ ಜಾಣ. ಆಸೆ ಇರಬೇಕು.ಅತಿ ಆಸೆ ದು:ಖಕ್ಕೆ ಕಾರಣ.

ಸರ್ಕಾರವನ್ನಾಗಲಿ,ಶ್ರೀಮಂತರನ್ನಾಗಲಿ,ವಿದೇಶಿಗಳನ್ನಾಗಲಿ,ಪರಕೀಯರನ್ನಾಗಲಿ ಪರಮಾತ್ಮರನ್ನಾಗಲಿ, ದೇವರನ್ನಾಗಲಿ, ದೇಶವನ್ನಾಗಲಿಬೇಡುತ್ತಾ ಹೋದರೆ ದೀನ ಜನರು ಬೆಳೆಯುತ್ತಾರೆ.

ಅನಿವಾರ್ಯ ಪರಿಸ್ಥಿತಿಗೆ ಇದು ಅಗತ್ಯವಿದೆ. ಅಂತಹ ಪರಿಸ್ಥಿತಿಯಲ್ಲಿ ಸಜ್ಜನರನ್ನು ಕೇಳಬಹುದು. ದುಷ್ಟಜನರ ಹತ್ತಿರ ಹೋದರೆ ಜೀವನವಿಡೀ ಅವರಿಂದ ಹೊರಬರದಂತೆ ಕಾಡುತ್ತಾರೆನ್ನಬಹುದು. ಕಷ್ಟದ ಸಮಯದಲ್ಲಿ ಸಹಾಯ ಮಾಡೋರೆ ನಿಜವಾದ ಮಾನವರು. ಜೀವರಕ್ಷಣೆಯ ಜೊತೆಗೆ ಆತ್ಮರಕ್ಷಣೆಗಾಗಿ ಭಗವಂತನಲ್ಲಿ ಬೇಡೋದು ಉತ್ತಮ ಬೇಡಿಕೆ. ಇದು ಅಷ್ಟು ಸುಲಭವಾಗಿ ಸಿಗದ ಕಾರಣ ಹೊರಗೆ ನಡೆಯುವುದು ಹೆಚ್ಚಾಗಿದೆ.

ಹಾಗಾಗಿ ಅವರಿಗೆ ಜ್ಞಾನದ ಶಿಕ್ಷಣ ನೀಡಿ ಸ್ವಾವಲಂಬನೆ ಬೆಳೆಸುವುದೆ ಜ್ಞಾನಿಗಳಾದವರ ಧರ್ಮ ಕರ್ಮ. ಅವರ ಋಣವನ್ನು ಅವರೆ ತೀರಿಸಿಕೊಳ್ಳಲು ಸತ್ಕರ್ಮದೆಡೆಗೆ ನಡೆಸುವುದೆ ಧರ್ಮ ಕಾರ್ಯ. ಸಮಾಜಸೇವೆ ಒಳ್ಳೆಯದು. ಆದರೆ, ಸೇವೆ ಮಾಡುವವರೆ ಬೇಡೋ ಹಾಗೆ ಆಗದಂತೆ ಎಚ್ಚರವಹಿಸಿದರೆ ಉತ್ತಮ. ಭಗವಂತನ ಸೇವೆಗೆ ಹಣಕ್ಕಿಂತ ಜ್ಞಾನವೇ ಮುಖ್ಯ.

ಹೀಗಾಗಿ ಹಿಂದಿನ ಮಹಾತ್ಮರುಗಳು ತಮ್ಮೆಲ್ಲಾ ಆಸ್ತಿಯನ್ನು ಸಮಾಜಕ್ಕೆ ಬಿಟ್ಟು ಸ್ವತಂತ್ರ ವಾಗಿ ದಾಸರಾಗಿದ್ದರು. ಶರಣರಾಗಿ ಕಾಯಕವೆ ಕೈಲಾಸವೆಂದು ಸ್ವಾವಲಂಬನೆ ಗೆ ಜಾರಿದ್ದರು. ಕಾಲ ಬದಲಾದರೂ ತತ್ವ ಬದಲಾಗೋದಿಲ್ಲ.

ಎಲ್ಲಾ ಒಂದೇ ಎನ್ನಬಹುದು. ಪ್ರತಿಫಲಾಪೇಕ್ಷೆಯಿಲ್ಲದ ಕರ್ಮವೆ ಶ್ರೇಷ್ಠ ವಾದದ್ದು, ಆದರೆ ಈಗ ದೇವರನ್ನು ಪೂಜಿಸುವುದೆ ಫಲಾಪೇಕ್ಷೆಯಿಂದ ಹೀಗಿರುವಾಗ ಧರ್ಮ ಕರ್ಮದಿಂದ ಜೀವ ಋಣಮುಕ್ತವಾಗುವುದೆ? ಲೋಕಕಲ್ಯಾಣಕ್ಕಾಗಿ ಬೇಡುವುದು ಅನಿವಾರ್ಯ. ನಿಜವಾಗಿಯೂ ಲೋಕದ ದೃಷ್ಟಿಯಲ್ಲಿ ನಮ್ಮ ಬೇಡಿಕೆಯ ಸಾತ್ವಿಕ ಭಾವನೆ ಇದ್ದರೆ ಸರಿ. ಇಲ್ಲವಾದರೆ ಬೇಡೋ ಅಗತ್ಯವಿಲ್ಲ.

ಇಷ್ಟಕ್ಕೂ ನಾವು ಪ್ರಜಾಪ್ರಭುತ್ವದ ಪ್ರಜೆಗಳಾಗಿ ದೇಶದ ರಕ್ಷಣೆಗೆ ಪ್ರಜೆಗಳನ್ನು ಬೇಡುವ ಹಾಗಾಗಿರೋದೆ ವಿಪರ್ಯಾಸ. ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ಭಗವಂತ ನಡೆಸುತ್ತಾನೆಂಬುದು ಅದ್ವೈತ, ಭಗವಂತನ ಪ್ರತಿನಿಧಿಯಾಗಿದ್ದು ನಾನೇ ನಡೆಸುತ್ತೇನೆಂಬುದೆ ರಾಜಕೀಯ ದ್ವೈತ. ನಾನೇ ಪರಾವಲಂಬನೆ ಯಲ್ಲಿರುವಾಗ ಪರರನ್ನು ಸ್ವಾವಲಂಬನೆಗೆಳೆಯಲು ಸಾಧ್ಯವೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group