ಹೆಸರಾಗಲಿ ಲಿಂಗಾಯತ
ಹೆಸರಾಗಲಿ ಲಿಂಗಾಯತ
ಉಸಿರಾಗಲಿ ಬಸವಣ್ಣ
ಗುರು ಲಿಂಗ ಜಂಗಮ
ಹುಸಿ ಹೋಗದ ಸಂಗಮ
ನಿತ್ಯದಲಿ ಕಾಯಕವು
ನಿರಂತರ ದಾಸೋಹ
ಬಸವಾಕ್ಷರವೇ ಮಹಾಮಂತ್ರ
ಶ್ರಮ ಸಂಸ್ಕೃತಿ ಪೂಜೆಯು
ಚೆನ್ನ ಕಕ್ಕ ಮಾಚ ಹರಳ
ನೀಲ ಗಂಗಾ ಅಕ್ಕ ನಾಗಮ್ಮ
ಹಾಸಿ ದುಡಿದರು ಜಗದ ಏಳಿಗೆ
ಹಂಚಿ ತಿಂದರು ಬಾಳಿಗೆ
ವಚನ ಹಿಡಿದು ಗೆದ್ದರು
ಸತ್ಯ ಸಮತೆ ಪ್ರೀತಿಯು
ಸಮರತಿ ಸಮಕಳೆ ಜೀವ
ಅರಿವು ಪ್ರಸಾದ ನಾಳಿಗೆ
ಕಟ್ಟ ಬೇಕು ಕಲ್ಯಾಣ
ವಿಶ್ವ ಪಥದ ಮನುಕುಲ
ಅಲ್ಲಮಾದಿ ಶರಣರಿಗೆ
ಎತ್ತ ಬೇಕು ಆರುತಿ
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

