ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವವು ಶುಕ್ರವಾರ 21/11/2025 ರಂದು ಸರ್ಕಾರಿ ಪ್ರಾಢಶಾಲೆ ಕೂಡಲಸಂಗಮದಲ್ಲಿ ನಡೆಯಿತು.
ಈ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳ ವಿವರ ಈ ರೀತಿಯಾಗಿದೆ ;
ಪ್ರಥಮ ಸ್ಥಾನ…
ಶ್ರೀನಿಧಿ ಚಲವಾದಿ – ಛದ್ಮವೇಶ
ರುಕ್ಮಿಣಿ ಮೇಟಿ – ಕಥೆ ಹೇಳುವುದು
ವೀಣಾ ಹುಚಕರಿ- ಕಂಠಪಾಠ ಕನ್ನಡ
ಸೌಭಾಗ್ಯಲಕ್ಷ್ಮೀ ಹುಚಕರಿ – ಕವನ ವಾಚನ
ಸೌಭಾಗ್ಯಲಕ್ಷ್ಮಿ ಹುಚಕರಿ – ಧಾರ್ಮಿಕ ಪಠಣ ಸಂಸ್ಕೃತ
ಸುಹಾನಿ ತಳ್ಳಿಕೇರಿ – ಭಕ್ತಿಗೀತೆ
ದ್ವಿತೀಯ ಸ್ಥಾನ…..
ಕಾಳಪ್ಪ ನಾರಾಯಣ ಬಡಿಗೇರ – ಚಿತ್ರಕಲೆ
ಸುಪ್ರೀತಾ ಕಾಗಿಯವರ – ಪ್ರಬಂಧ
ಸಮರ್ಥ ಮೇಟಿ- ಕ್ಲೇ ಮಾಡಲಿಂಗ್
ಕೀರ್ತಿ ಭದ್ರಶೆಟ್ಟಿ- ಮಿಮಿಕ್ರಿ
ಸೃಷ್ಟಿ ಕಂಬಾರ- ಕಥೆ ಹೇಳುವುದು
ಶ್ರದ್ಧಾ ಭದ್ರಶೆಟ್ಟಿ- ಅಭಿನಯ ಗೀತೆ
ರಾಜೇಶ್ವರಿ ಇದ್ದಲಗಿ – ದೇಶಭಕ್ತಿ ಗೀತೆ
ವೀಣಾ ಹುಚಕರಿ- ಭಕ್ತಿ ಗೀತೆ
ತೃತೀಯ ಸ್ಥಾನ….
ಬೀರಪ್ಪ ಚಿತ್ತರಗಿ- ಕಂಠಪಾಠ ಕನ್ನಡ
ಈ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ಗುರುಮಾತೆಯಾಗಿರುವ ಶ್ರೀಮತಿ ಬಿ ಬಿ ದೇವದುರ್ಗ ಹಾಗೂ ಹಿರಿಯ ಶಿಕ್ಷಕರಾಗಿರುವ ಬಿ ಎಂ ಅಂಗಡಿ, ಹಾಗೂ ವಿಜ್ಞಾನ ಶಿಕ್ಷಕರಾಗಿರುವ ಎಂ. ಎಚ್. ಪೂಜಾರಿ ಮತ್ತು ಗಣಿತ ಶಿಕ್ಷಕರಾಗಿರುವ ಮುತ್ತು ಯ. ವಡ್ಡರ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾಗಿರುವ ಹನಮಂತ ಮಾದರ ಹಾಗೂ ಗೌರವ ಶಿಕ್ಷಕಿಯಾಗಿರುವ ಶ್ರೀಮತಿ ವಿದ್ಯಾ ಕನಕನ್ನವರ ಹರ್ಷ ವ್ಯಕ್ತ ಪಡಿಸಿದ್ದಾರೆ.
ಕೂಡಲಸಂಗಮ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿಜೇತರಾಗಿರುವ ಮತ್ತು ಹುನಗುಂದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಹಿರೇಮಳಗಾವಿ ಊರಿನ ಗುರು ಹಿರಿಯರು ಶಿಕ್ಷಣ ಪ್ರೇಮಿಗಳು ಪಾಲಕ ಪೋಷಕರು ಶುಭಾಶಯ ಕೋರಿದ್ದಾರೆ.

