ಜಾನಪದ ಸಾಹಿತ್ಯಾಸಕ್ತರು, ಆಧುನಿಕ ಕನ್ಯೆ, ಮಿಲನ, ಪುನರ್ಜನ್ಮ,ಶ್ವೇತಾಂಬರ ಇತ್ಯಾದಿ ಸಾಹಿತ್ಯ ಕ್ರೃತಿಗಳ ಸ್ರೃಜಕರು,’ಉತ್ತರಾಂಚಲದ ಅಂಚಿನಲ್ಲಿ ನಾನು ಕೃಷ್ಣ’ ಪ್ರವಾಸ ಕಥನ ಕರ್ತೃ, ವೃತ್ತಿಜೀವನ ಪ್ರಾಮಾಣಿಕವಾಗಿ ಪೂರೈಸಿ ಶಿಕ್ಷಣ ಕ್ಷೇತ್ರದಲ್ಲಿ ಉಪ ನಿರ್ದೇಶಕರಾಗಿ ಅಮೂಲ್ಯ ಸೇವೆಗೈದು ನಿವೃತ್ತರಾದವರು, ಶಿರಹಟ್ಟಿ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಗೋಷ್ಠಿ ಉದ್ಘಾಟಿಸಿ ಉಪನ್ಯಾಸಗೈದವರು, ಮೂಲತಃ ಗ್ರಾಮೀಣ ಪ್ರದೇಶದ ಜನಾಂಗದ ಸಂಸ್ಕೃತಿಯನ್ನರಿತು ಅದರಂತೆ ಬದುಕಿದವರು, ಹಂತಿ ಹೊಡೆದು ಹಂತಿ ಪದ ಹಾಡಿದವರು,ಹತ್ತಿಬಿಡಿಸಿ ಹಾಡುತ್ತಲಿರುವ ಹಾಡುಗಾರರು, ಸಸಿ ನೆಟ್ಟು ಖುಷಿ ಪಟ್ಟವರು, ಮದುವೆ ಮಂಗಲ ಕಾರ್ಯಗಳಲ್ಲಿ ಸೋಬಾನೆ ಪದ ಕೇಳಿ,ಕುಟ್ಟುವ ಬೀಸುವ ಪದಗಳನ್ನಾಲಿಸುತ್ತಾ, ‘ಆದಾವ ನಮ್ಮಜ್ವಾಳ ಉಳಿದಾವ ನಮ್ಮ ಹಾಡು’ ಎಂಬ ಸೊಲ್ಲು ಆಲಿಸಿ ಜಾನಪದದ ಶ್ರೇಷ್ಠತೆಯನ್ನರಿತವರು, ಜಾನಪದ ಸಾಹಿತ್ಯದ ಮಹತ್ವ ಹಾಗೂ ಅದರ ಪ್ರಯೋಜನದ ಸೊಗಡಿನ ಕುರಿತು ಹಲವಾರು ಸಮಾರಂಭಗಳಲ್ಲಿ ಉಪನ್ಯಾಸಗೈದವರು ಐ ಬಿ ಬೆನಕೊಪ್ಪ ಅವರು.
ಶ್ರೀಯುತರ ನಿಷ್ಠೆ ಪ್ರಾಮಾಣಿಕತೆ ಪ್ರಬುದ್ಧತೆ ಶ್ರದ್ಧೆ ಬಹುಮುಖ ಪ್ರತಿಭೆ ಉದಯೋನ್ಮುಖ ಯುವ ನಾಯಕತ್ವ ಪರಿಗಣಿಸಿ ಡಿಪ್ಲೋಮಾ ಇನ್ ರಿಮ್ಸ್ ಪ್ರಶಸ್ತಿ, ಮೈಸೂರಿನವರು ಕೊಡುವಂತಹ ಎಲ್.ವಿ. ರಾಜಗೋಪಾಲಚಾರಿ ಎಂಡೋಮೆಂಟ್ ಅವಾರ್ಡ್ ಪ್ರಶಸ್ತಿ, ಧಾರವಾಡ ಜಿಲ್ಲಾ ಮಟ್ಟದ ಕ್ರಿಯಾಶೀಲ ಸಂಶೋಧನೆಯಲ್ಲಿ ಪ್ರಥಮ ಬಹುಮಾನ, ಹಾಗೂ ಗದುಗಿನ ಜ.ತೋಂ.ಮಠದ ಪೂಜ್ಯರಿಂದ ವೆಲ್ ರೀಡ್ ಆಫೀಸರ್ ಬಿರುದಾಂಕಿತರಾಗಿರುವ ಬೆನಕೊಪ್ಪ ಅವರು ರಾಜ್ಯ ಮಟ್ಟದ ಎಸ್.ಆರ್.ಜಿ. ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಅನುಪಮ ಸೇವೆ ವೀಕ್ಷಿಸಿರುವ ಕನ್ನಡ ಜಾನಪದ ಪರಿಷತ್ತು(ರಿ) ಬೆಂಗಳೂರಿನ ರಾಜ್ಯಾಧ್ಯಕ್ಷರಾಗಿರುವ ಡಾ.ಎಸ್.ಬಾಲಾಜಿ ಅವರು ಗದಗ ಜಿಲ್ಲೆಯ ಕ.ಜಾ.ಪ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಆದೇಶವಿತ್ತು ಗೌರವಿಸುವ ನಿಮಿತ್ತ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಉದ್ಘಾಟಕರಾಗಿ ಪಾಲ್ಗೊಂಡು ಪದಗ್ರಹಣ ನೆರವೇರಿಸಲು ಗದಗ ನಗರಕ್ಕೆ ಗಣ್ಯರಾಗಿ ಆಗಮಿಸುವ ರಾಜ್ಯಾಧ್ಯಕ್ಷರಿಗೆ ಗದಗ ಜಿಲ್ಲೆಯ ಘಟಕದ ಜಾನಪದ ಸಾಹಿತ್ಯಾಸಕ್ತರು ಹೃತ್ಪೂರ್ವಕವಾಗಿ ಸ್ವಾಗತಿಸುವ ಮೂಲಕ ಶುಭ ಹಾರೈಸಿರುತ್ತಾರೆ.
—ಪ್ರೊ. ಶಕುಂತಲಾ.ಚನ್ನಪ್ಪ. ಸಿಂಧೂರ.
ಜಾನಪದ ಸಾಹಿತ್ಯ ಸಂಶೋಧಕರು,
ಗದಗ.

