ಕವನ : ಓ ಭಗವಂತ ನಾನೆಷ್ಟು ಪುಣ್ಯವಂತ

Must Read

ಓ ಭಗವಂತ ನಾನೆಷ್ಟು ಪುಣ್ಯವಂತ

ಹೃದಯವಂತರ ಮನೆಯಲಿ ಜನಿಸಿ
ಪ್ರೀತಿಯ ಹೊದರಿನಲಿ ಬೆಳೆಸಿ
ವಾತ್ಸಲ್ಯದ ಕಡಲಿನಲಿ ಮುಳುಗಿಸಿ
ಬದುಕಿನ ದಾರಿ ತೋರಿಸುತಿಹೆ
ಓ ಭಗವಂತ ನಾನೆಷ್ಟು ಪುಣ್ಯವಂತ

ಕಷ್ಟ ಸುಖದಲಿ ಕೈ ಹಿಡಿದು ನಡೆಸುವ ಗೆಳೆಯರು
ಸರಿದಾರಿ ತೋರುವ ಗುರುವರ್ಯರು
ಭ್ರಾತೃತ್ವದ ಬಾಂಧವ್ಯಸುಖ ನೀಡುವ ಸಹೋದರ/ರಿಯರು
ದಾಂಪತ್ಯದ ಗುಟ್ಟನರಿತು ಬಾಳುವ ಧರ್ಮಪತ್ನಿ
ಎಲ್ಲಾ ಸುಖವ ದಯಪಾಲಿಸುತಿಹೆ
ಓ ಭಗವಂತ ನಾನೆಷ್ಟು ಪುಣ್ಯವಂತ

ಬಾಂದಳದಿ ಜಗದ ಚಲನೆಗೆ ನೇಸರ
ಸನಿಹದಲಿ ಜುಳು ಜುಳು ಹರಿಯುವ ಜೀವನದಿ
ಬಯಲಿನೊಳು ತಂಗಾಳಿಯ ತಂಪು ಸೂಸುವ ಮಾರುತ
ಧರೆಯ ಮಣ್ಣಿನೊಳು ಉದರ ಪೋಷಣೆಗೈಯುತಿಹ
ಈ ಜನ್ಮ ಸಂತೃಪ್ತಿಯ ಭಾವದೊಡಲು
ಓ ಭಗವಂತ ನಾನೆಷ್ಟು ಪುಣ್ಯವಂತ

ಪ್ರೀತಿ ಬಾಂಧವ್ಯದ ದೇವಮಂದಿರದಂತಿಹ ಮಹಾವಿದ್ಯಾಲಯ
ಕಹಿನೆನಪು ಮರೆಸಿ ಸಿಹಿ ನೆನಪು ಸೂಸುವ ವಿದ್ಯಾರ್ಥಿ ಸಮೂಹ
ಜ್ಞಾನದ ಖಜಾನೆಯ
ಪುಸ್ತಕ ಮನೆ ಜೊತೆಯಿರಲು ಇನ್ನೇನು ಬೇಕು?
ಓ ಭಗವಂತ ನಾನೆಷ್ಟು ಪುಣ್ಯವಂತ

✍️✍️ ಶಿವಕುಮಾರ ಕೋಡಿಹಾಳ ಮೂಡಲಗಿ

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group