ಧರ್ಮಟ್ಟಿ ಹಳ್ಳದ ಸೇತುವೆ ರಿಪೇರಿ ಯಾವಾಗ ?

Must Read

ಮೂಡಲಗಿ – ಮೂಡಲಗಿ-ಧರ್ಮಟ್ಟಿ ರಸ್ತೆಯು ತಕ್ಕ ಮಟ್ಟಿಗೆ ಸುವ್ಯವಸ್ಥಿತವಾಗಿದ್ದು ಧರ್ಮಟ್ಟಿ ಗ್ರಾಮದ ಸಮೀಪದ ಹಳ್ಳದ ಸೇತುವೆ ರಸ್ತೆ ಮಾತ್ರ ರಿಪೇರಿಯಾಗದೇ ಸಾರ್ವಜನಕರಿಗೆ ತುಂಬಾ ತೊಂದರೆಯುಂಟಾಗುತ್ತಿದೆ.

ಈ ಸೇತುವೆ ಹಾಗೂ ಎರಡೂ ಬದಿಯಲ್ಲಿ ರಸ್ತೆ ತುಂಬಾ ಹದಗೆಟ್ಟಿದೆ. ಕಬ್ಬಿನ ಟ್ರಾಕ್ಟರ್ ಗಳ ಓಡಾಟದಿಂದಾಗಿ ರಸ್ತೆಯಿಂದ ಕಲ್ಲುಗಳು ಮೇಲೆದ್ದು ಜನರು ಪರದಾಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಪೆಟ್ಟು ಹಚ್ಚಿಕೊಂಡಿರುವ ಪ್ರಕರಣಗಳೂ ನಡೆದಿದ್ದು ಈ ರಸ್ತೆಗೆ ಯಾರೂ ದಿಕ್ಕಿಲ್ಲವೆ ಎಂದು ಪ್ರಶ್ನಿಸುವಂತಾಗಿದೆ.

 

ಹದಗೆಟ್ಟು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಧರ್ಮಟ್ಟಿ ಸೇತುವೆ ರಸ್ತೆ

ಸದರಿ ರಸ್ತೆಯ ಬಗ್ಗೆ ಲೋಕೋಪಯೋಗಿ ಇಲಾಖೆಯಾಗಲಿ, ತಾಲೂಕಾಡಳಿತವಾಗಲಿ, ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸುವ ಶಾಸಕರಾಗಲಿ ಗಮನಹರಿಸದೇ ಇದ್ದದ್ದು ವಿಚಿತ್ರ. ಮೂಡಲಗಿ ಧರ್ಮಟ್ಟಿ ಗ್ರಾಮಗಳ ನಡುವಿನ ಉಳಿದೆಲ್ಲ ರಸ್ತೆ ಸ್ವಲ್ಪ ಚೆನ್ನಾಗಿದೆ ಆದರೆ ಈ ಸೇತುವೆ ರಸ್ತೆ ಮಾತ್ರ ಯಾಕೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ? ಇದು ಯಾವ ಇಲಾಖೆಗೆ ಸಂಬಂಧಿಸಿದೆ ? ಯಾವಾಗ ರಿಪೇರಿಯಾಗುತ್ಗದೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿದ್ದು ಯಾವುದಾದರೂ ಕಬ್ಬಿನ ವಾಹನ ಪಲ್ಟಿಯಾಗಿ ಅನಾಹುತವಾದಾಗಲೇ ತಾಲೂಕಾಡಳಿತ ಎಚ್ಚತ್ತುಗೊಳ್ಳುವುದೇ ಕಾದು ನೋಡಬೇಕು

ಉಮೇಶ ಬೆಳಕೂಡ, ಮೂಡಲಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group