ಮೈಸೂರು-ಕರ್ನಾಟಕ ಇತಿಹಾಸ ಸಾಂಸ್ಕೃತಿಕ ಕಲಾ ಸಂಸ್ಥೆ (ನೋಂ), ಮೈಸೂರು ಇವರ ವತಿಯಿಂದ ನೂತನ ಕಛೇರಿ ಉದ್ಘಾಟನೆ ಹಾಗೂ ಅಭಿನಂದನಾ ಸಮಾರಂಭವನ್ನು ಶ್ರೀರಾಂಪುರ ೨ನೇ ಹಂತದಲ್ಲಿರುವ ಶ್ರೀ ನಾಗಲಿಂಗೇಶ್ವರಸ್ವಾಮಿ ದೇವಸ್ಥಾನದ ಹತ್ತಿರದ ರಾಜರಾಜೇಶ್ವರಿ ಆರ್ಕೆಡ್ನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ದೇವರತ್ನ ಪೌಂಡೇಶನ್ನ ಸಂಸ್ಥಾಪಕ ಹಾಗೂ ವಕೀಲ ಎಂ.ಶಿವಪ್ರಸಾದ್ ಅವರು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸ ಸಾಂಸ್ಕೃತಿಕ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜೆ.ಸಿ.ಇತಿಹಾಸ ಹಾಗೂ ಶ್ರೀಮತಿ ಸುಶೀಲ ಇತಿಹಾಸ್, ಬಿಜೆಪಿ ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಹೆಚ್.ಎಂ.ಹಾಡ್ಯ ಶಂಕರ್, ಕಂದಾಯ ಇಲಾಖೆಯ ಮಲ್ಲೇಶ್, ಪೊಲೀಸ್ ಇಲಾಖೆಯ ನಾಗರಾಜು, ಹವ್ಯಾಸಿ ಗಾಯಕರಾದ ಶಿವಣ್ಣ ಹಾಗೂ ಮಹದೇವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಮಂದಿ ಮಹನೀಯರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು

