ಬದುಕು ಕಟ್ಟಿಕೊಂಡೆ
ನನ್ನ ಜೊತೆಗಿದ್ದವರೆ
ನನ್ನನ್ನು ನೀರಿಗೆ ತಳ್ಳಿದರು
ನಾನು ಅನಿವಾರ್ಯ
ಈಜು ಕಲಿತು ಬಿಟ್ಟೆ
ನಾನು ನಡೆವ ದಾರಿಗೆ
ಅವರು ಎಸೆದರು
ಕಲ್ಲು ದಿಮ್ಮಿ ಬಂಡೆಗಳು
ನಾನು ಮನೆಯ ಕಟ್ಟಿಕೊಂಡೇ
ನನ್ನನ್ನೊಬ್ಬನೇ ಮಾಡಿದರು
ನಾನು ಅವರಿಂದ ದೂರವಾದೆ
ನನಗೆ ನಾನು ಹತ್ತಿರವಾದೆ
ನಾನು ಪ್ರೀತಿಸುವುದ ಕಲಿತುಬಿಟ್ಟೆ
ಒಂಟಿತನ ನನಗೆ ಗುರು
ನೋವು ಅಪಮಾನ
ನನ್ನ ಪಠ್ಯ ಕ್ರಮಗಳು
ನಾನು ಬದುಕು ಕಟ್ಟಿಕೊಂಡೆ
__________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

