ಮೂಡಲಗಿ: ಕಬ್ನಿನ ನಿಗದಿಗಾಗಿ ನಿರಂತರ ಹೋರಾಟ ಮಾಡಿ ರೈತರಿಗೆ ಯಶಸ್ಸು ತಂದುಕೊಟ್ಟ ರೈತ ಮುಖಂಡರಿಗೆ
ತಾಲೂಕಿನ ಶಿವಾಪೂರ ಗ್ರಾಮದಲ್ಲಿ ಸನ್ಮಾನ ಕಾರ್ಯಕ್ರಮ ರೈತ ಬಾಂಧವರಿಂದ ಜರುಗಿತು.
ತಾಲೂಕಿನ ಗುರ್ಲಾಪುರದಲ್ಲಿ ಐತಿಹಾಸಿಕ ರೈತ ಹೋರಾಟದ ಮುಖಾಂತರ ಕಬ್ಬಿಗೆ ಟನ್ನಿಗೆ 3300 ರೂ.ಕೊಡಿಸುವಲ್ಲಿ ಅವಿರತ ಶ್ರಮಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಶ್ರೀಶೈಲ ಅಂಗಡಿ ಅವರಿಗೆ ಮಂಗಳವಾರ ಶಿವಾಪೂರ ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ ರೈತರು ಒಗ್ಗಟ್ಟಾಗಿದ್ದರೆ ಎಲ್ಲ ಹೋರಾಟಗಳು ಯಶಸ್ವಿಯಾಗಲು ಸಾಧ್ಯವಾಗುತ್ತವೆ,ನೀವು ಮಾಡುತ್ತಿರುವ ಸನ್ಮಾನಗಳು ನಮಗೆ ರೈತರ ಪರವಾಗಿ ಕೆಲಸ ಮಾಡಲು ಮತ್ತಷ್ಟು ಸ್ಫೂರ್ತಿ ನೀಡುತ್ತಿದೆ ಎಂದರು.
ಗ್ರಾಮದ ಮುಖಂಡರಾದ ಮಲ್ಲನಗೌಡ ಶಂಕರಗೌಡ ಪಾಟೀಲ ಮಾತನಾಡಿ ಗುರ್ಲಾಪುರ ಐತಿಹಾಸಿಕ ಹೋರಾಟದಿಂದ ರೈತರಿಗೆ ಕಬ್ಬಿಗೆ ಹೆಚ್ಚಿನ ಬೆಲೆ ಕೊಡಿಸುವುದರ ಜೊತೆಗೆ ಕಾರ್ಖಾನೆಯಲ್ಲಿ ತೂಕದಲ್ಲಿ ಆಗುತ್ತಿದ್ದ ಮೋಸ ಕೂಡಾ ಇವತ್ತಿನ ದಿನ ಕಡಿಮೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಚನ್ನಮಲ್ಲಪ್ಪ ಕುಡಚಿ, ಅಲ್ಲಪ್ಪ ಕಿತ್ತೂರು,ಶಿವನಪ್ಪ ರಡ್ಡರಟಿ,ಗ್ರಾಂ ಪಂಚಾಯಿತಿ ಉಪಾಧ್ಯಕ್ಷ ಮಲ್ಲಪ್ಪ ಜುಂಜರವಾಡ,ಸಿದ್ದನಗೌಡ ಪಾಟೀಲ ,ಈಶ್ವರ ಬೆಳಗಲಿ, ಮಲ್ಲಪ್ಪ ಡವಳೆಶ್ವರ ಸೇರಿದಂತೆ ಗ್ರಾಮದ ಎಲ್ಲ ಮುಖಂಡರು ಯುವಕರು ಉಪಸ್ಥಿತರಿದ್ದರು.

