ಇನ್ನೂ ಕನಸಿದೆ
ಇನ್ನೂ ಕನಸಿದೆ
ಬಣ್ಣ ಬಣ್ಣದ ಚಿತ್ರ
ಸುಳಿವ ಗಾಳಿ
ಸುರಿವ ಮಳೆ
ಹಕ್ಕಿ ಪಕ್ಷಿಗಳ ಇಂಚರ
ನೀಲಿ ಆಗಸದಲಿ ಹಾರುವ
ಬಿಳಿ ಪಾರಿವಾಳ
ಅದೆಷ್ಟೋ ಭಾವಗಳು
ಕವನವಾಗುವ ಸಮಯ
ಬೆಸಗೊಳ್ಳುತ್ತಿವೆ
ಪದ ಲಯ
ಶಬ್ದಗಳ ಸಂಭ್ರಮ
ಸೂರ್ಯನೇ
ನೀನು ಇಷ್ಟು ಬೇಗ
ಏಕೆ ಉದಯಿಸಿ ಬಿಟ್ಟೆ
ಇನ್ನೂ ಕನಸಿದೆ
ಮಧುರ ಕ್ಷಣಗಳನ್ನು
ಕನಸಿನಲ್ಲಾದರೂ ಕಂಡು
ಕೊಂಚ ನೆಮ್ಮದಿಯಿಂದ
ಇರುತ್ತಿದ್ದೆ
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

