ಶ್ರೀ ಗುರು ಗವಿಸಿದ್ಧೇಶ
ಕೊಪ್ಪಳದ ಗವಿಮಠದ ಕಳಸ
ಮಾನವತೆಯ ಮಂದಾರ
ಭೂಲೋಕದ ಅನರ್ಘ್ಯ ರತ್ನ
ಸಕಲರಿಗೂ ಕಾಮಧೇನು
ಕನ್ನಡ ನಾಡಿನ ಮೇರುತೇರು
ಶ್ರೀ ಗುರು ಗವಿಸಿದ್ಧೇಶ
ಬಳಲಿ ಬಂದ ಭಕ್ತರಿಗೆ
ನುಡಿಗಳೇ ಅಮೃತ ತೀರ್ಥ
ಬದುಕು ಕಲಿಸುವ
ನಿಮ್ಮ ಅಂತಃಕರಣ
ನುಡಿಗಳೇ ದೈವ ತೋರಣ
ಕಷ್ಟಗಳಿಗೆ ದಿವ್ಯೌಷಧ ನೀಡಿ
ಬಾಳು ಬೆಳಗುವ ಸಂಜೀವಿನಿ
ಶ್ರೀ ಗುರು ಗವಿಸಿದ್ಧೇಶ
ಹೊಟ್ಟೆಗೆ ಅನ್ನವ ನೀಡಿ
ಮಸ್ತಕಕ್ಕೆ ಜ್ಞಾನ ನೀಡುವ
ಕಾರ್ಯ ಜಗವಂದಿತ
ಸಂಸ್ಕಾರ ಸಂಸ್ಕೃತಿಯ ಕೈಂಕರ್ಯದಲಿ ಲೋಕ ಬೆಳಗುವಿರಿ
ವಿಶ್ವವಂದಿತ ಜ್ಯೋತಿ
ಸಕಲ ಕಲ್ಯಾಣ ಮೂರುತಿ
ಮಾತೃ ಹೃದಯದ ದೇವತೆ
ಶ್ರೀ ಗುರು ಗವಿಸಿದ್ಧೇಶ
ಜಗವು ಹಾಳು ಹರಟೆ
ಬದುಕೊಂದು ಮೂರಾಬಟ್ಟೆ
ಎಂದವರಿಗೆ ಸುಖ ದುಃಖಗಳ
ಸಮಾನತೆಯ ಮಂತ್ರ ಕಲಿಸಿಕೊಟ್ಟ ಗುರು
ನಮ್ಮ ಪಾಲಿನ
ದೇವತಾ ಮನುಷ್ಯ
ಎಲ್ಲರ ಬಾಳಿನ ಬೆಳಕಾಗಿರುವೆ
ನಾ ಅನುಭಾವಿಸುವೆ ಪ್ರತಿದಿನ ಪ್ರತಿಕ್ಷಣ ನಿನ್ನೊಳು
ಲೀನವಾಗಲಿ ನನ್ನೀ ಮನ ನಿನ್ನ ಅಂತರಂಗದ ಕೋಣೆಯಲಿ
ದಿವ್ಯಾನಂದದ ಅನುಭೂತಿ ದಯಪಾಲಿಸು ಪಾವನ ಮೂರ್ತಿ
ಶ್ರೀ ಗುರು ಗವಿಸಿದ್ಧೇಶ
✍️ ಶಿವಕುಮಾರ ಕೋಡಿಹಾಳ
ಮೂಡಲಗಿ

