ಶಿರಸಂಗಿ ಲಿಂಗರಾಜರು
ಹುಟ್ಟಿದಿರಿ
ನೀವು ಶಿಗ್ಗಲಿಯ
ಕೊಂಪೆಯಲ್ಲಿ
ಬಡತನ ಬಳಲಿಕೆ
ದಾರಿದ್ರ್ಯದ ಬದುಕು
ಪ್ರತಿಭೆಗೆ ಉಸಿರು
ರಾಮಪ್ಪನ ಹೆಸರು
ಶಿರಸಂಗಿ ಸಂಸ್ಥಾನಕೆ
ದತ್ತು ಬಂದಿರಿ ನೀವು
ಕಟ್ಟಿದಿರಿ ಕೆರೆ ಭಾವಿ
ಕೃಷಿಯ ಸಿರಿ ಸಂಪತ್ತು
ಮಕ್ಕಳಿಲ್ಲದೆ ಬಂತು
ಸಂಸ್ಥಾನಕ್ಕೆ ಆಪತ್ತು
ಅರಟಾಳರ ಸಹಯೋಗ
ಅಥಣಿ ಶಿವಯೋಗಿಗಳ ದರ್ಶನ
ಮಕ್ಕಳೆಲ್ಲರೂ ನಿನ್ನವರು
ಶಿಕ್ಷಣಕೆ ಕೊಟ್ಟುಬಿಡು
ಶಿವಯೋಗಿಯ ವಾಣಿ
ಸಂಸ್ಥಾನವ ದಾನ ಮಾಡಿದರು
ಲಿಂಗಾಯತ ಮಕ್ಕಳಿಗೆ.
ಬಸವ ಹಚ್ಚಿದ ದೀಪಕ್ಕೆ
ತೈಲವಾದಿರಿ ನೀವು
ನಿಮ್ಮ ಬೆಳಕಲ್ಲೇ
ಬಾಳು ನೂಕಿದೆವು ನಾವು
ಡಾ.ಶಶಿಕಾಂತ.ಪಟ್ಟಣ ಪುಣೆ
( ಇಂದು ಸಿರಸಂಗಿಯ ಲಿಂಗರಾಜರ ಜಯಂತಿ 1861ಜನವರಿ 10 ಶಿಗ್ಗಲಿ ಒಣ ಸಿಗ್ಗಲಿಯಲ್ಲಿ ಹುಟ್ಟಿದ ರಾಮಪ್ಪ ಮುಂದೆ ಶಿರಸಂಗಿ ಸಂಸ್ಥಾನಕ್ಕೆ ಅಧಿಪತಿಯಾಗಿ ಜನಪರ ಕಾರ್ಯಕ್ರಮಗಳನ್ನು ಕೈಕೊಂಡು ಸಂಗ್ರಹ ಆಸ್ತಿಯನ್ನು ಬಡ ಲಿಂಗಾಯತ ಮಕ್ಕಳಿಗೆ ದಾನ ಮಾಡಿದ ಶ್ರೇಷ್ಠ ಪುರುಷ ಒಮ್ಮೆ ಅವರನ್ನು ನೆನೆಯೋಣ ಬನ್ನಿ )

