ಅಪರಾಜಿತೆ
ತರುಣಿಯ ತೋಳ್ಬಂದಿಗೂ
ತುಮುಲವಿದೆ
ತಿಳಿದವರಾರು?ಕಣ್ಣ ಕುಲುಮೆಯಲಿ ದಿನವು
ಕುದಿಯುವ
ಕುವರಿಯಾರೋ ಕೇಳಿದವರಾರು?ಮಂದಸ್ಮಿತೆ
ಮಲ್ಲೆ ಮುಡಿಯುವಳು
ಮಧುವನಕೆ ಕರೆಯುವಳುಮೂಗುನತ್ತಲ್ಲೂ ಸೆಳೆಯುವಳು
ಮಂದಬೆಳಕಲ್ಲೂ ಮಿನುಗುವಳು
ಮದನಕೂಟದರಸಿಯಾಗುವಳುಜುಮುಕಿ ಲೋಲಾಕು ವಯ್ಯಾರ
ಜರಿಸೀರೆ ತೊಟ್ಟ ಮಂದಾರ
ಜೋಕುಮಾರರ ಚಕೋರಗುಂಗುರು ಕೂದಲ ಸುಳಿಯಲಿ
ಗಮ್ಯದರಿವು ಮರೆಸುವ
ಗಂಧವತಿಯ ಘಮಲೆ ಅಮರನೂರು ನರಕವ ದಾಟಿದ
ನಾಲ್ಕು ಲೋಕವ ಸುತ್ತಿದ
ನಡುಬೀದಿ ಹೂವಿಗೆ ಮರಣವಿಲ್ಲಉಪಮೆಗಳ ಕಟ್ಟಿ ಅವಳ
ಉಡಿ ತುಂಬುವಂತಿಲ್ಲ
‘ಉದರ ನಿಮಿತ್ತ’ ಮರೆಯುವಂತಿಲ್ಲಹಗಲಿನಲಿ ತಲೆಗೇರಿ
ಹೆಜ್ಜೆ ತಪ್ಪಿಸುವ ಕಟು
ಹೆಂಡದಂತವಳುಕೆಂದಾವರೆ ಮೊಗದ
ಕನ್ನಿಕೆ ಕೊನೆಯಿರದ
ಕತೆಯಂತವಳುಅಂಧಕಾರದಲಿ ಅರಳಿದ
ಅಪರಾಜಿತೆಗೆ ಬಲೆಯ
ಬೀಸುವವರಾರು?ತಾ ಸೋತು ಸೋಲಿಸುವ
ಕಲೆಯ ಕಲಿತವಳೆದುರು
ಗೆದ್ದು ಬರುವವರಾರು?ಹಳದಿ ಕಂಗಳ ಕೊಳೆ ತೊಳೆದು ಹಸುಗೂಸಿನಂತೆ ಮಡಿಲಲ್ಲಿ ಮಲಗಿಸಿಕೊಳ್ಳಿ
ತುಸು ಸಮಯ ನೀಡಿ
ಅವಳೆದೆಯ ಬೇಗುದಿ
ಕೇಳಿಸಿಕೊಳ್ಳಿಕೊಟ್ಟರೂ ಕೊಡಬಹುದು ದೇಹ ದೇಗುಲದೊಳು ಬಚ್ಚಿಟ್ಟ ಗರ್ಭಗುಡಿ ಬೀಗ
ತೆರೆದು ನೋಡಲು ದೇವ
ಕಾಣುವನಾಗ !ಡಾ.ಭವ್ಯ ಅಶೋಕ್ ಸಂಪಗಾರ್

